ಬಂಟ್ವಾಳ: ಸಂಬಂದಿಕರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ಎರಡು ಮಕ್ಕಳ ತಾಯಿ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಕಡೆಗೊಲಿ ಎಂಬಲ್ಲಿನ ಸುರೇಶ್ ಪೂಜಾರಿ ಎಂಬವರ ಪತ್ನಿ ಕುಸುಮಾ (35) ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.
ಕುಸುಮಾ ಬೀಡಿ ಕಟ್ಟುತ್ತಿದ್ದು ಅವರ ತಾಯಿ ಮನೆಯಲ್ಲಿ ಇವರು ವಾಸವಾಗಿದ್ದು ಪತಿ ಸುರೇಶ್ ಪೂಜಾರಿ ಅವರು ಕೂಲಿ ಕೆಲಸ ಮಾಡುತ್ತಿದ್ದು ಎಂದಿನಂತೆ ಅವರು ಜುಲ್ಯಾ 8ರಂದು ಕೆಲಸಕ್ಕೆ ಹೋಗಿದ್ದರು, ಗಂಡ ಕೆಲಸಕ್ಕೆ ಹೋದ ಬಳಿಕ ತಾನು ಸಂಬಂದಿಕರ ಮನೆಗೆ ಹೋಗಿ ಬರುತ್ತೇನೆಂದು ತಾಯಿಯಲ್ಲಿ ಹೇಳಿ ಹೋದವರು ವಾಪಾಸು ಮನೆಗೆ ಬರದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
