ಡಿವೈಎಫ್ಐ ಉಳ್ಳಾಲವಲಯ ಸಮ್ಮೇಳನವು ಆಗಸ್ಟ್ 20, 2017 ರಂದು ಕುತ್ತಾರ್ ಎಮ್ವೈಎಮ್ ಸಭಾಂಗಣದಲ್ಲಿ ನಡೆಯಲಿದ್ದು ಇದರ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ತೊಕ್ಕೊಟ್ಟಿನಲ್ಲಿ ನಡೆಯಿತು. ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾಗಿ ವಕೀಲರಾದ ಗಂಗಾಧರ ಉಳ್ಳಾಲ್ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹಾಬಲ ಟಿ. ದೆಪ್ಪಲಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಆಶೋಕ್ ಶೆಟ್ಟಿ ಚೆಂಬುಗುಡ್ಡೆ, ಕೋಶಾಧಿಕಾರಿಯಾಗಿ ರಜಾಕ್ ಮೊಂಟೆಪದವು ಅವರನ್ನು ಆಯ್ಕೆಮಾಡಲಾಯಿತು ಅದರ ಜೊತೆಗೆ 5 ಜನರನ್ನು ಗೌರವ ಸಲಹೆಗಾರರಾಗಿ, 32 ಜನರನ್ನು ಉಪಾಧ್ಯಕ್ಷರಾಗಿ, 41 ಜನರನ್ನು ಕಾರ್ಯದರ್ಶಿಯಾಗಿ ಸಮ್ಮೇಳನದ ಸ್ವಾಗತ ಸಮಿತಿಗೆ ಆಯ್ಕೆ ಮಾಡಲಾಯಿತು.
ಸಮ್ಮೇಳನದ ಯಶಸ್ವಿಗಾಗಿ ನಡೆಯಬೇಕಾದ ಕೆಲಸಗಳ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮಾರ್ಗದರ್ಶನ ನೀಡಿದರು, ಈ ಸಭೆಯಲ್ಲಿ ಆಙಈI ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್, ಡಿವೈಎಫ್ಐI ಮಾಜಿ ಮುಖಂಡರುಗಳಾದ ರಾಮಚಂದ್ರ ಬಬ್ಬುಕಟ್ಟೆ, ಅರುಣ್ ಕುಮಾರ್, ಕಾರ್ಮಿಕ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಬಾಬು ಪಿಲಾರ್, ಸಂಜೀವ ಪಿಲಾರ್, ಆನಂದ ಬೆಳ್ಚಡ, ಡಿವೈಎಫ್ಐ ಉಳ್ಳಾಲವಲಯ ಮುಖಂಡರಾದ ರಫೀಕ್ ಹರೇಕಳ,ರೋಹಿದಾಸ್ ಭಟ್ನಗರ, ಹರೀಶ್ ಕೆರೆಬೈಲ್, ನಿತಿನ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.
