ವಾಮಂಜೂರು: ಶಿಕ್ಷಣ ಹಾಗೂ ಸಾಮಾಜಿಕಕ್ರಾಂತಿಯ ಹರಿಕಾರದೇವರ ಸೇವಕ ವಂ|ರೇಮಂಡ್ ಫ್ರಾನ್ಸಿಸ್‍ಕಮಿಲ್ಲಸ್ ಮಸ್ಕರೇನ್ಹಸ್‍ರವರು ಸ್ಥಾಪಿಸಿದ ಬೆಥನಿ ಸಂಸ್ಥೆಗೆ 97ವರ್ಷ ತುಂಬಿದ ಸಂಭ್ರಮದ ಸವಿ ನೆನಪು ಬೆಥನಿ ಸಂಸ್ಥಾಪನಾ ದಿನಾಚರಣೆಯನ್ನು ಸಂತರೈಮಂಡ್ಸ್ ಪದವಿ ಪೂರ್ವಕಾಲೇಜಿನಲ್ಲಿಆಚರಿಸಲಾಯಿತು.SONY DSC

ಆಂಗ್ಲಮಾಧ್ಯಮ ಪ್ರೌಢಶಾಲೆಯೊಡಗೂಡಿಆಚರಿಸಲಾದ ಈ ಕಾರ್ಯಕ್ರಮದಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಭಗಿನಿ ಸಾಧನಾರವರು ವಹಿಸಿ ಬಡವರು – ಶೋಷಿತರು, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಫಾ|ರೈಮಂಡ್ ಮಸ್ಕರೇನ್ಹಸ್‍ರ ಶ್ರಮಅಪಾರವಾದುದು. ಇದು ನಮಗೆಲ್ಲರಿಗೂಅನುಕರಣೀಯ ಹಾಗೂ ಅನುಸರಣೀಯಎಂದು ಸಂದೇಶವಿತ್ತರು. ಆಂಗ್ಲಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ವಿಧಿ ನೆರವೇರಿಸಿದರು. ತದನಂತರ ಪದವಿಪೂರ್ವ ವಿದ್ಯಾರ್ಥಿಗಳಿಂದ ಬೆಥನಿ ಮೌಲ್ಯಗಳನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉಭಯ ಸಂಸ್ಥೆಗಳ ಶಿಕ್ಷಕ –ಉಪನ್ಯಾಸಕ ವೃಂದ ಈ ಸಂದರ್ಭ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಖತೀಜತುಲ್‍ಅಫ್ರಾಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸಂಧ್ಯಾ ವಂದನಾರ್ಪಣೆಗೈದರು.

By Suddi9

Leave a Reply

Your email address will not be published. Required fields are marked *