ಬಂಟ್ವಾಳ: ಶ್ರಿ ಕೃಷ್ಣ ಶಿಶು ಮಂದಿರ ಸಜೀಪ ಮೂಡ ಇಲ್ಲಿ ಗುರು ಪೌರ್ಣಿಮೆಯ ಅಂಗವಾಗಿ ಶಿಶು ಮಂದಿರ ಮಕ್ಕಳಿಂದ ಸಾಮೂಹಿಕ ಗುರು ಪೂಜೆ ಆಚರಿಸಲಾಯಿತು. ಗುರು ಪೌರ್ಣಿಮೆಯ ಮಹತ್ವವನ್ನು ಅರ್ಚಕ ಎಂ.ಸುಬ್ರಹ್ಮಣ್ಯ ಭಟ್ ತಿಳಿಸಿದರು. ಮಾತಾಜಿ ಚಂದ್ರಕಲಾ ಸ್ವಾಗತಿಸಿ ವಂದಿಸಿದರು. ಇದೇ ಸಂದರ್ಭ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶಿಶು ಮಂದಿರದ ಆಡಳಿತ ಸಮಿತಿಯ ಸದಸ್ಯ ಶರತ್ ಮಡಿವಾಳ ಅಗಲಿಕೆಗೆ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನವಾಚರಿಲಾಯಿತು.
