ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಅನುದಾನದ ಕೊರತೆ ಇದ್ದರೂ ಕೂಡಾ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ರಸ್ತೆಗಳು, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಒದಗಿಸಲು ಬಧ್ಧನಾಗಿದ್ದೇನೆ.ಮುಂದಿನ ದಿನಗಳಲ್ಲಿ ಯೋಜಿತ ಅಭಿವೃಧ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ನಾವು ಸಫಲರಾಗುತ್ತೇವೆ ಎಂಬ ನಂನಿಕೆಯಿದೆ.ಎಂದು  ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿಯವರು ತೀರಾ ಹದಗೆಟ್ಟ ಕೊಟ್ಟಿಂಜ ಕೊಡ್ಮಾಣ್ ಸಂಪರ್ಕ ರಸ್ತೆಗೆ 10 ಲಕ್ಷ ರೂಪಾಯಿಗಳ ಅನುದಾನದಿಂದ ಕಾಂಕ್ರೀಟಿಕರಣ ಗೊಳಿಸುವ ಕಾರ್ಯಕ್ಕೆ ಶಿಲಾನ್ಯಾಸದ ಸಂದರ್ಭದಲ್ಲಿ ಮಾತನಾಡಿದರು.IMG_6977_resize

IMG_6992_resize

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿದಾನ ಸಭಾ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಶ್ರೀ ಮನೋಜ್ ಆಚಾರ್ಯ ನಾಣ್ಯ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ತುಂಬೆ, ಮೇರ ಮಜಲು ಗ್ರಾಮಪಂಚಾಯತ್ ಅಧ್ಯಕ್ಷ ಸತೀಷ ನಾಯ್ಗ, ಉಪಾಧ್ಯಕ್ಷೆ ಯವರಾದ ಜಯಶ್ರೀ ಕರ್ಕೇರಾ, ಬಿಜೆಪಿ ಮಂಗಳೂರು ಮಂಡಲ ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಶೈಲಜಾ ಪಿ.ಶೆಟ್ಟಿ ,ಬಂಟ್ವಾಳ ಎ.ಪಿ.ಎಂ.ಸಿ ಸದಸ್ಯ ವಿಠ್ಠಲ ಸಾಲ್ಯಾನ್ ,ಗ್ರಾಮ ಪಂಚಾಯತ್ ಸದಸ್ಯರುಗಳಾದ ಪದ್ಮನಾಭ ಶೆಟ್ಟಿ ಕೊಟ್ಟಿಂಜ,ರವಿ ಕೋಟ್ಯಾನ್ ಅಬ್ಬೆಟ್ಟು, ಪುದು ಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ದಿನೇಶ್ ಆರ.ಶೆಟ್ಟಿ ಕೊಟ್ಟಿಂಜ,ಕಾಮು ಮೂಲ್ಯ ಚಾಪೆ,ಚಂದ್ರಹಾಸ ಶೆಟ್ಟಿ ಕೊಟ್ಟಿಂಜ ,ನವೀನ್ ಮಾರ್ಲ ,ಸಂತೋಷ್ ಶೆಟ್ಟಿ ಕೊಟ್ಟಿಂಜ, ಪ್ರಶಾಂತ್ ಕೊಟ್ಟಾರಿ,ಗುತ್ತಿಗೆದಾರರಾದ ದಿನೇಶ್ ರೈ ಕಳ್ಳಿಗೆ, ಸದಾಶಿವ ಶೆಟ್ಟಿ ಕೊಟ್ಟಿಂಜ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *