ಬಂಟ್ವಾಳ : ಜ್ಞಾನ, ಧ್ಯಾನ, ತಪಸ್ಸು ಇದು ಮನುಷ್ಯನಿಗೆ ಅಗತ್ಯ ಎಂದು ಮುನಿಶ್ರೀ 108 ವೀರ ಸಾಗರ ಮಹಾರಾಜ ಹೇಳಿದರು. ಇವರು ಶ್ರೀ ಕ್ಷೇತ್ರ ಪಾಣೇರ್ ಭ| ಶ್ರೀ 1008 ಅನಂತನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಪ್ರಪ್ರಥಮವಾಗಿ ನಡೆಯುತ್ತಿರುವ ಭವ್ಯ ಮಂಗಲ ವರ್ಷಾಯೋಗ ಹಾಗೂ ಚಾತುರ್ಮಾಸ ನಿಮಿತ್ತ ಆದಿತ್ಯವಾರ ನಡೆದ ಕಲಶ ಸ್ಥಾಪನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿ ಆಡಂಭರದ ಜೀವನದ ಅಗತ್ಯವಿಲ್ಲ. ಅದರಿಂದ ಯಾವ ಲಾಭವೂ ಇಲ್ಲ. ನಾವು ಯಾವಾಗಲೂ ಪುಣ್ಯ ಸಂಚಯಿಸುವ ಕೆಲಸವನ್ನು ಮಾಡಬೇಕು. ಶ್ರದ್ಧೆ, ಭಕ್ತಿ ಭಗವಂತನ ಸಾಕ್ಷಾತ್ಕಾರಕ್ಕೆ ಅಗತ್ಯ. ಇವನ್ನು ಪ್ರತಿಯೊಬ್ಬರೂ ಮೈಗೂಡಿಸಕೊಂಡರೆ ಲೋಕಕ್ಕೂ ಒಳ್ಳೆಯಾಗುತ್ತದೆ ಎಂದರು.

KAR_6806
ಶ್ರೀ ಕ್ಷೇತ್ರ ಸೋಂದಾದ ಭಟ್ಟಾಕಲಂಕ ಭಟ್ಟಾರಕ ಸ್ವಾಮಿಗಳು ಮಾತನಾಡಿ ಯೋಗ ಎಲ್ಲರಿಗೂ ದೊರೆಯುತ್ತದೆ. ಧರ್ಮದ ಯೋಗವನ್ನು ಎಲ್ಲರೂ ಆಚರಿಸಬೇಕು. ಈ ಚಾತುರ್ಮಾಸದಲ್ಲಿ ಧರ್ಮದ ಯೋಗ ಹೆಚ್ಚಾಗಿದೆ. ಇಂದು ಗುರುಪೂರ್ಣಿಮೆಯಾಗಿದ್ದು ಒಳ್ಳೆಯ ದಿನವಾಗಿದೆ. ಗುರು ಶಿಷ್ಯರ ಮಿಲನದ ದಿನವಾಗಿದ್ದು ಎಲ್ಲರೂ ಈ ದಿನದ ಮಹತ್ವವನ್ನು ಅರಿಯಬೇಕಾಗಿದೆ ಎಂದರು. ಧಾರ್ಮಿಕ ವಿಧಿವಿಧಾನಗಳಿಗೆ ಒತ್ತು ನೀಡಬೇಕು ಎಂದು ಹೇಳಿ ಮುನಿಶ್ರೀ ವೀರ ಸಾಗರರೊಂದಿಗೆ ಕಲಶ ಮಹೋತ್ಸವವನ್ನು ನೆರವೇರಿಸಿದರು ಚಾತುರ್ಮಾಸ ಸಮಿತಿಯ ಗೌರವ ಸಂರಕ್ಷಕ, ಎಸ್.ಸಿ.ಡಿ.ಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಕಲಶ ಸ್ಥಾಪನೆ ಮಾಡಿದರು. ಗೌರವ ಸಂರಕ್ಷಕ ಜಿನರಾಜ ಆರಿಗ ಪಚ್ಚಾಜೆ ಧ್ವಜಾರೋಹಣ ಮಾಡಿದರು. ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಹೊಸಂಗಡಿ ಅರಮನೆ, ಗೌರವ ಸಂರಕ್ಷಕರಾದ ಭರತ್ ಕುಮಾರ್ ಬಲ್ಲೋಡಿಗುತ್ತು, ಜಯವರ್ಮರಾಜ್ ಬಲ್ಲಾಳ್, ಪುಷ್ಪರಾಜ್ ಜೈನ್ ಮಂಗಳೂರು, ಚಾತುರ್ಮಾಸ ಸಮಿತಿಯ ಅಧ್ಯಕ್ಷ ರತ್ನಾಕರ ಜೈನ್ ಮಂಗಳೂರು, ಜಿ.ಪಂ ಸದಸ್ಯ ಪದ್ಮಶೇಖರ ಜೈನ್, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಇಂದ್ರ ಪಾಣೆಮಂಗಳೂರು, ಕಾರ್ಯದರ್ಶಿಗಳಾದ ಸುಭಾಶ್ಚಂದ್ರ ಜೈನ್ ಬಂಟ್ವಾಳ, ಹರ್ಷರಾಜ್ ಬಲ್ಲಾಳ್, ಬಿ.ಸಿ.ರೋಡು, ಆರಾಧನ ಸಮಿತಿ ಸಂಚಾಲಕ ಆದಿರಾಜ್ ಜೈನ್, ಕೊಯಕ್ಕುಡೆ, ಸ್ವಾಗತ ಸಮಿತಿ ಸಂಚಾಲಕ ಸತೀಶ್ ಜೈನ್ ಪಿಲಿಂಗಾಲು, ಸಭಾ ಸಮಿತಿ ಸಂಚಾಲಕ ಡಾ| ಸುದೀಪ್ ಇಂದ್ರ ಸಿದ್ಧಕಟ್ಟೆ, ಆಹಾರ ಸಮಿತಿ ಸಂಚಾಲಕ ರಘುಚಂದ್ರ ಜೈನ್ ವಾಮದಪದವು, ಪ್ರಚಾರ ಸಮಿತಿ ಸಂಚಾಲಕ ಸುಕುಮಾರ್ ಬಲ್ಲಾಳ್, ಪುರೋಹಿತ ಸಮಿತಿ ಸಂಚಾಲಕ ಅಜಿತ್ ಕುಮಾರ್ ಇಂದ್ರ ಹಚ್ಚಾಡಿ ಬಸದಿ, ಉಪಸ್ಥಿತರಿದ್ದರು.ಬಂಟ್ವಾಳ ಭೂಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *