ಬಂಟ್ವಾಳ: ಬರಿಮಾರು ಹಿ.ಪ್ರಾ.ಶಾಲೆಯಲ್ಲಿ ಜೂ. 28ರಂದು ಶಾಲಾ ಮಕ್ಕಳಿಗೆ ಉದ್ಯಮಿ ಜಗದೀಶ ಎಸ್.ಪೂಜಾರಿ ಬರಿಮಾರು 100 ಮಕ್ಕಳಿಗೆ ಎರಡು ಜೊತೆ ಉಚಿತ ಸಮವಸ್ತ್ರ ವಿತರಿಸಿದ್ದು ,ಕೊಡುಗೆ ನೀಡಿದ ದಾನಿಯವರನ್ನು ಸಮ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ನೇತಾರ ರಾಜೇಶ್ ನಾೈಕ್ ಉಳಿಪಾಡಿಗುತ್ತು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ ಜಗದೀಶ್‍ನಂತಹ ಉದ್ಯಮಿಗಳು ಈ ರೀತಿಯಲ್ಲಿ ಸರಕಾರಿ ಶಾಲೆಗೆ ಕೊಡುಗೆ ನೀಡಿದ್ದರೆ ಖಂಡಿತವಾಗಿಯು ಅಭಿವೃದ್ದಿಯಾಗಲು ಸಾಧ್ಯ ಎಂದರು. ಅಲ್ಲದೇ ತಾನೂ ಈ ಶಾಲೆಗೆ ಕಂಪ್ಯೂಟರ್ ನೀಡುತ್ತೇನೆ ಎಂದರು.

0107bteph4
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಸದೃಢವಾಗಿ ಮತ್ತು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು. ಉದ್ಯಮಿ ಜಗದೀಶ್ ಮಾತನಾಡಿ ತಮ್ಮ ಶಾಲೆಯಲ್ಲಿ ಮಕ್ಕಳು ಶಿಸ್ತಿನ ಸಿಪಾಯಿಗಳಾಗಿ ಒಳ್ಳೆಯ ವಿದ್ಯಾರ್ಥಿಗಳಾಗಿ ಬಾಳಿ ಮತ್ತು ತಮ್ಮ ಜೀವನದಲ್ಲಿ ನಡೆದ ಹಾದಿಯನ್ನು ಸ್ಮರಿಸಿದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಗ್ರಾ.ಪಂ.ಅಧ್ಯಕ್ಷ ವಸಂತ ಪಟ್ಲಕೋಡಿ, ಪಂ.ಸದಸ್ಯ, ಹಳೇ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ಹರಿಕೃಷ್ಣ ಬಿ.ಎಸ್., ಅಧ್ಯಕ್ಷ ಧನಂಜಯ ಬಲ್ಯ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಕಲ್ಯಾಣಿ ಜಿ. ಸ್ವಾಗತಿಸಿ, ಶಿಕ್ಷಕಿ ಮಂಗಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *