ಬಂಟ್ವಾಳ: ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದ್ದು,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತ್ರತ್ವದಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ,ಪಕ್ಷ ಅಧಿಕಾರಕ್ಕೆರುವುದು ನಿಶ್ಚಿತ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ನುಡಿದಿದ್ದಾರೆ.ಶುಕ್ರವಾರ ಬಿ.ಸಿ.ರೋಡಿನ ಟ್ರೇಡ್ ಸಂಟರ್ ಕಟ್ಟಡದಲ್ಲಿ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಕಾರ್ಯಾಲಯದ ಉದ್ಘಾಟನೆ ಸರಳ ಸಮಾರಂಭದಲ್ಲಿ ಶುಭ ಹಾರೈಸಿ ಮಾತನಾಡಿದ ಅವರು ,ಗೆಲ್ಲುವ 150 ಸ್ಥಾನದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರವು ಒಳಗೊಂಡಿದೆ ಎಂದರು.30bhbjp

ಭವಿಷ್ಯದ ನಾಯಕ ರಾಜೇಶ್ ನಾಯ್ಕ್ ಉಳಿಪಾಡಿಯವರು ನಿರಂತರವಾಗಿ ಕಾರ್ಯಕರ್ತರು,ಜನರ ಒಡನಾಟದಲ್ಲಿದ್ದು,ಜನಸಾಮಾನ್ಯರ ಸಮಸ್ಯೆ,ಕಷ್ಠಗಳಿಗೂ ಸ್ಪಂದಿಸುವ ಮೂಲಕ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸುತ್ತಿದ್ದಾರೆ ಎಂದ ಅವರು ಪಕ್ಷದ ಮುಖಂಡರು,ಕಾರ್ಯಕರ್ತರು ತಮ್ಮೊಳಗಿನ ವೈಮನಸ್ಸನ್ನು ಈ ಕ್ಷಣದಿಂದಲೆ ಮರೆತು ಎಲ್ಲರೂ ಒಗ್ಗಟ್ಟು,ವಿಶಾಲ ಮನಸ್ಸಿನಿಂದ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.ಜನಸಂಘದಿಂದ ಹಿಡಿದು ಬಿಜೆಪಿಯ ಈ ಹಿಂದಿನ ಮತ್ತು ಈಗೀನ ಸ್ಥಿತಿಯನ್ನು ಮೆಲುಕು ಹಾಕಿದ ರುಕ್ಮಯ ಪೂಜಾರಿ ಅವರು ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಹಲವಾರು ಜನಪರ ಯೋಜನೆ ಜಾರಿಗೊಳಿಸಿದೆ ಎಂದ ಅವರು ಸಂಸದ ನಳೀನ್ ಕುಮಾರ್ ಕಟೀಲ್ ಅವರು ಕೂಡ ಜಿಲ್ಲೆಯ ಅಭಿವ್ರದ್ದಿಗೆ ಸಾಕಷ್ಟು ಕೆಲಸ ಮಾಡುತ್ತಿದ್ದು,ಅವರ ಮುತುವರ್ಜಿಯಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ಜಿಲ್ಲೆಗೆ ಮಂಜೂರಾಗಿದ್ದು,ಇದನ್ನು ಕೂಡ ಜನರಿಗೆ ತಿಳಿಹೇಳುವ ಕಾರ್ಯ ಕಾರ್ಯಕರ್ತರಿಂದಾಗಬೇಕು ಎಂದರು.

ನೂತನ ಕಾರ್ಯಲಯದ ಉದ್ಫಾಟನೆಯನ್ನು ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಬಿ.ಉದಯ ಕುಮಾರ್ ರಾವ್ ದೀಪ ಬೆಳಗಿಸಿ ನೆರವೇರಿಸಿದರು. ಸಮಾರಂಭದಲ್ಲಿ ಪಕ್ಷದ ಪ್ರಮುಖರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರಾಜ್ಯ ಸಹವಕ್ತಾರೆ ಸುಲೋಚನ ಜಿ.ಕೆ ಭಟ್, ಕ್ಷೇತ್ರದ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಜಿಲ್ಲಾ ಕಾರ್ಯದರ್ಶಿ ಸುಗುಣ ಕಿಣಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ, ಕ್ಷೇತ್ರದ ಪ್ರಧಾನಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಕ್ಷೇತ್ರದ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ, ಕ್ಷೇತ್ರ ಕಾರ್ಯದರ್ಶಿಗಳಾದ ರಮನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ, ಸೀಮಾ ಮಾಧವ, ಜಿಲ್ಲಾ ಹಿಂದುಳಿದ ಮೋರ್ಚಾದ ಪ್ರಧಾನಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಜಿಲ್ಲಾ ಎಸ್.ಸಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಸಾಂತಪ್ಪ ಪೂಜಾರಿ, ವಸಂತ ಅಣ್ಣಳಿಕೆ, ತನಿಯಪ್ಪ ಗೌಡ, ಪುರುಷೋತ್ತಮ ಶೆಟ್ಟಿ, ವಜ್ರನಾಥ ಕಲ್ಲಡ್ಕ, ಸಂತೋಷ್ ರಾಯಿ, ವಿಠಲ ನಾಯ್ಕ, ಜಯರಾಮ ನಾಯ್ಕ, ಗಂಗಾಧರ ಕೋಟ್ಯಾನ್, ಜಯಂತಿ ,ನಂದರಾಮ ರೈ, ದುರ್ಗಾದಾಸ್ ಶೆಟ್ಟಿ, ರೂಪ ಡಿ ಬಂಗೇರ, ಸಂಧ್ಯಾ ವೆಂಕಟೇಶ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *