ಬಂಟ್ವಾಳ :ಬಿ.ಸಿ.ರೋಡಿನ ಸರ್ವಿಸ್ ರಸ್ತೆ ಹೊಂಡಗಳಿಂದ ಛಿದ್ರವಾಗಿ ಮತ್ತಷ್ಟು ವಿರೂಪಗೊಂಡಿದೆ.ಅರಂಭದಿಂದ ಅಂತ್ಯದವರೆಗೂ ಅಲ್ಲಲ್ಲಿ  ಬಿದ್ದಿರುವ ಹೊಂಡಗಳ ಸಂಖ್ಯೆಯು ಹೆಚ್ಚಿದ್ದಲ್ಲದೆ ಅಳ,ಅಗಲವನ್ನು ಕೂಡ ವಿಸ್ರರಿಸಿದ್ದು,ಸಂಚಾರವೇ ಅಪಾಯಕಾರಿ ಮಟ್ಟಕ್ಕೆ ತಲುಪಿದಂತಿದೆ. ಈರಸ್ತೆಯಲ್ಲಿ ಜನಸಾಮಾನ್ಯರು ನಡೆದಾಡುವ ಮಾತು ಬದಿಗಿರಲಿ ವಾಹನಗಳಂತು ಎದ್ದು,ಬಿದ್ದು ವಾಲಿಕೊಂಡು ಸಂಚರಿಸುವ ಮೂಲಕ ಭಯವನ್ನಟ್ಟಿಸುತ್ತಿದೆ.ಪ್ರತಿವರ್ಷ ಮಳೆಗಾಲದಲ್ಲಿ ಸರ್ವಿಸ್ ರಸ್ತೆಯಲ್ಲಿ ಹೊಂಡಗಳದ್ದೆ ಕಾರುಬಾರು ಆದರೆ ಈ ವರ್ಷದಲ್ಲಂತು ಸರ್ವಿಸ್ ರಸ್ತೆ ಬರ್ಬಾದ್ ಅಗಿದ್ದು ವಸ್ತುಶ: ಮ್ರತ್ಯುಕೂಪದಂತಾಗಿದೆ.20170628_153822

ಹತ್ತು ದಿನಗಳ ಹಿಂದೆಯಷ್ಠೆ ಚಾಲಕ ಸಮುದಾಯ ಸಾರ್ವಜನಿಕರ ಸಹಕಾರದಲ್ಲಿ ಪ್ರತಿಭಟನೆ ನಡೆಸಿ ಸಂಬಂಧಿಸಿದ ಇಲಾಖೆ,ಜನಪ್ರತಿನಿಧಿಗಳ ಗಮನಸೆಳೆದು ರಸ್ತೆ ದುರಸ್ಥಿ ೧೫ ದಿನಗಳ ಗಡುವು ನೀಡಿದ್ದರು.ಆದರೆ ಚಾಲಕರ ಈಬೇಡಿಕೆ ಮಾತ್ರ ಇನ್ನು ಈಡೇರಿಲ್ಲ.ಈ ನಡುವೆ ಪ್ರತಿಭಟನಾಕಾರರ ಕಣ್ಣೋರೆಸುವ ತಂತ್ರವಾಗಿ ರಾ.ಹೆ.ಪ್ರಾ.ಇಲಾಖೆ ಸಿಮೆಂಟ್ ಮಿಶ್ರಿತ ಜಲ್ಲಿಯನ್ನು ಮೇಲ್ಸತುವೆಯ ಒಂದು ಬದಿಗೆ ಹಾಕಿತ್ತು.ಬಳಿಕ ಸುರಿದ ಧಾರಾಕಾರ ಮಳೆಗೆ ಈ ಜಲ್ಲಿ ನೀರಿನಲ್ಲಿ ಕೊಚ್ಚಿ ಹೋಯಿತು.ಜೊತೆಗೆ ಚರಂಡಿಯಲ್ಲಿ ಹರಿಯಬೇಕಾದ ಮಲಕೆ ನೀರು ರಸ್ತೆಯಲ್ಲೆ ಹರಿದ ಪರಿಣಾಮ ರಸ್ತೆಯ ಡಾಮಾರು ಕೂಡ ಎದ್ದು ಹೋಗಿ ಸಂಚಾರವೇ ದುಸ್ತರವಾದ ಸ್ಥಿತಿ ಉಂಟಾಗಿದೆ.ನರಕಯಾತನೆ : ಮಳೆಗಾಲದಲ್ಲಿ ಬಿ.ಸಿ.ರೋಡಿಗೆ ಬರುವುದೇ ಸಮಸ್ಯೆಯಾಗಿ ಕಾಡಿದೆ.ಒಂದೆಡೆ ರಸ್ತೆಯುದ್ದಕ್ಕೂ ಹೊಂಡ,ಗುಂಡಿ ಇನ್ನೊಂದೆಡೆ ರಸ್ತೆಯ ಇಕ್ಕೆಲದಲ್ಲಿ ಕೆಸರಿನಿಂದ ನಡೆದಾಡಲು ಹರಸಾಹಸ ಪಡಬೇಕು  .ಮೇಲ್ಸತುವೆಯ ಕಾಮಗಾರಿ ಪೂರ್ಣವಾದರೂ ಇಲ್ಲಿನ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ.20170628_174950

ಒಟ್ಟಾರೆ ಇಲ್ಲಿ ನರಕಯಾತನೆಯ ಅನುಭವ…ಬೇಸಿಗೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶವಿದ್ದರೂ ಅಗ ಉದಾಸೀನತೆ ಯಿಂದ ಬೆಚ್ಚಗೆ ಮಲಗುವ ಇಲಾಖೆ ಮಳೆ ಶುರುವಾಗುತ್ತಿದ್ದಂತೆ  ಆರಂಬಿಸಿ ಜನರಿಗೆ ಹಿಂಸೆ ನೀಡುತ್ತಿದ್ದಾರೆ.ಇಲ್ಲಿ ಚರಂಡಿ ಕಾಮಗಾರಿ ಆರಂಭಿಸಿ ಈಗ ಆರ್ಧಕ್ಕೆ ನಿಲ್ಲಿಸಿದ್ದಾರೆ.ಇದನ್ನು ಕೆಳಬೇಕಾದ ಮತ್ತು ಒತ್ತಡ ಹೇರಿ ಕೆಲಸ ಮಾಡಿಸಬೇಕಾದ ಜನಪ್ರತಿನಿಧಿಗಳು ತಮ್ಮ ಪುರುಸೊತ್ತಿಗೆ ಅಧಿಕಾರಿಗಳ ಸಭೆ ನಡೆಸಿ ಅಲ್ಲಿಗೆ ಬಿಟ್ಟುಬಿಡುತ್ತಾರೆ.  ಶಾಶ್ವತ ಪರಿಹಾರ ಮಾಡಿ ;  ಚಾಲಕರು ಕೂಡ ಮಳೆಗಾಲದಲ್ಲಿ ಸರ್ವಿಸ್ ರಸ್ತೆಯಲ್ಲಿ ಹೊಂದಾಣಿಕ ಮಾಡಿಕೊಂಡು ಪ್ರಯಾಣಿಸುತ್ತಾರೆ.ಸಂಚಾರಕ್ಕೆ ಸಾಧ್ಯವೇ ಇಲ್ಲಂದಾಗ ಪ್ರತಿಭಟನೆಗೆ ಮುಂದಾಗುತ್ತಾರೆ.

ಆಗ ರಾ.ಹೆ.ಪ್ರಾ.ಇಲಾಖೆ ಸಿಮೆಂಟ್ ಮಿಶ್ರಿತ ಜಲ್ಲಿ ತೇಪೆ ಹಾಕಿ ಕೈತೊಳೆದುಕೊಂಡು ದುಂದುವೆಚ್ಚ ಮಾಡುತ್ತಾರೆ.ಮುಂದಿನ ವರ್ಷ ಸಮಸ್ಯೆ ಮತ್ತೆ ಮರುಕಳಿಸುತ್ತದೆ.ಹಾಗಾಗಿ ಈರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾಂಕ್ರೀಟಿಕರಣಗೊಳಿಸುವ ಸಲಹೆ ಸಾರ್ವಜನಿಕರಿಂ ಕೇಳಿ ಬಂದಿದೆ.     ಹಣ ಎಲ್ಲಿ ಹೋಗುತ್ತದೆ ?; ಬಿ.ಸಿ.ರೋಡಿನ ಸರ್ವಿಸ್ ರಸ್ತೆಯ ಸಮಸ್ಯೆ ಇಂದು,ನಿನ್ನೆಯದಲ್ಲ,ಇದರ ಸುಸ್ಥಿತಿಗೆ ತರಲು ಈಗಾಗಲೇ ಪ್ರತಿಭಟನೆ ನಡೆಸಿ ೧೫ ದಿನಗಳ ಗಡುವು ನೀಡಿದ್ದರೂ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ.

ವಾಹನ ಚಾಲಕರ ಸಂಘಟನೆ ಮತ್ತೆ ಸಭೆ ಸೇರಿ ಚರ್ಚೆ ನಡೆಸಿದ್ದು,ನಿಷೇದಾಜ್ಙೆ ಮುಗಿದಾಕ್ಷಣ ತೀವ್ರ ಸ್ವರೂಪದ ಹೋರಾಟ ನಡೆಸಲು ಯೋಚಿಸಿದ್ದೆವೆ .ವಾಹನ ಚಾಲಕರು ಸಾರಿಗೆ ಇಲಾಖೆಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸುತ್ತಾರೆ.ರಸ್ತೆ ನಿರ್ವಹಣಾ ವೆಚ್ಚವಾಗಿ ತೆರಿಗೆ ನೀಡುತ್ತಾರೆ.ಆದರೆ ಈಹಣ ಎಲ್ಲಿ ಹೋಗುತ್ತದೆ ? ಎಂದು ದ.ಕ.ಜಿಲ್ಲಾ ಟೂರಿಸ್ಟ್ಕಾರು,ವ್ಯಾನ್ ಚಾಲಕರ ಸಂಘದ ಮುಖಂಡ ಪ್ರಭಾಕರ ದೈವಗುಡ್ಡೆ ಅವರ ಪ್ರಶ್ನೆಯಾಗಿದೆ.

By Suddi9

Leave a Reply

Your email address will not be published. Required fields are marked *