ಬಂಟ್ವಾಳ:ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ರೋಟರಿ ಸಮುದಾಯ ದಳ ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು.
ನೂತನ ಅಧ್ಯಕ್ಷರಾಗಿ ಮುಖ್ಯಶಿಕ್ಷಕ ಸುಧೀರ್ ಜಿ., ಉಪಾಧ್ಯಕ್ಷರಾಗಿ ಕೆ.ಆಶ್ರಫ್ ಕುಟ್ಟಿಕಳ, ಕಾರ್ಯದರ್ಶಿಯಾಗಿ ಶ್ರೀಶ ಭಟ್, ಜೊತೆ ಕಾರ್ಯದರ್ಶಿಯಾಗಿ ಸತೀಶ ಕಾರಂಬಡೆ, ಕೋಶಾಧಿಕಾರಿಯಾಗಿ ಸುಧೀರ್ ಕುಮಾರ್ ಶೆಟ್ಟಿ ರಾಯಿ, ಸಂಘಟನಾ ಕಾರ್ಯದರ್ಶಿಯಾಗಿ ಸದಾನಂದ ಶೀತಾಲ, ಕ್ರೀಡಾ ಕಾರ್ಯದರ್ಶಿಯಾಗಿ ಜನಾರ್ದನ ರಾಯಿ, ನಿರ್ದೇಶಕರಾಗಿ ಜಗದೀಶ ಕೊಯಿಲ, ಮೋಹನ್ ಕೆ.ಶ್ರೀಯಾನ್ ರಾಯಿ, ಅಬ್ದುಲ್ ಖಾದರ್ ಕೊಯಿಲ, ಸತೀಶ ಕೊಯಿಲ, ದಿನೇಶ ಕುದ್ಕೋಳಿ, ಗೌರವ ಸಲಹೆಗಾರರಾಗಿ ಎ.ಗೋಪಿನಾಥ ರೈ ರಾಯಿ, ಜೆ.ಕೆ.ಪಾವನಾದೇವಿ, ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ದೇವಪ್ಪ ಕರ್ಕೇರ ನೆಕ್ಕರೆಗುಳಿ ಇವರನ್ನು ಆಯ್ಕೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
