ವಿಟ್ಲ ಜೂನ್ 21: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಗ ತರಬೇತುದಾರ ರಾಜೇಶ್‍ರವರು ಮಾತನಾಡುತ್ತಾ “ದೈಹಿಕ ಹಾಗೂ ಮಾನಸಿಕ ಶಕ್ತಿಗೆ ಯೋಗ ಬಹಳ ಅಗತ್ಯ” ಎಂದರು. ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕ ಪ್ರಹ್ಲಾದ್.ಜೆ.ಶೆಟ್ಟಿ ಮಾತನಾಡುತ್ತಾ “ಕಷ್ಟವಾದರೂ ಇಷ್ಟಾರ್ಥ ಸಾಧನೆಗೆ ಯೋಗ ಉತ್ತಮ ಅವಕಾಶ ಒದಗಿಸುತ್ತದೆ”.

IMG_1602

IMG_1612

IMG_1614

IMG_1616

IMG_1623 IMG_1626

ಶಾಲಾ ಆಡಳಿತ ಮಂಡಳಿಯ ಕಾರ್ಯರ್ಶಿ ಕೆ.ನಾರಾಯಣ.ಶೆಟ್ಟಿ, ಆಡಳಿತಾಧಿಕಾರಿ ಸಿ.ಶ್ರೀಧರ್, ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ.ವಿ.ಶೆಟ್ಟಿ ಹಾಗೂ ಗ್ರೇಸ್.ಪಿ.ಸಲ್ಡಾನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಗದ ಆಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ನಿರ್ದೇಶಿಸಿ ಶಾಂತಿ ಮಂತ್ರದೊಂದಿಗೆ ಯೋಗಾಸನ ಕೊನೆಗೊಳಿಸಲಾಯಿತು. ಶಿಕ್ಷಕರಿಯರಾದ ಶುಭಾ.ಕೆ ಸ್ವಾಗತಿಸಿ, ಲೀಲಾ ವಂದಿಸಿದರು. ಸುಧಾ ಎನ್. ರಾವ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *