ಬಂಟ್ವಾಳ: ಕಳೆದ ಮೂರು ವಾರಗಳಿಂದ ಮುಂಜಾಗ್ರತಾ ಕ್ರಮವಾಗಿ ಸೆ.೧೪೪ ನಿಷೇದಾಜ್ಙೆ ಜಾರಿಯಲ್ಲಿರುವಂತೆ ಮಂಗಳವಾರ ಸಂಜೆ ಕಲ್ಲಡ್ಕದಲ್ಲಿ ಮತ್ತೆ ಘರ್ಷಣೆ ನಡೆದಿದೆ.ಕ್ಷುಲ್ಲಕ ಕಾರಣಕ್ಕೆ ವಿಭಿನ್ನ ಕೋಮಗಳ ತಂಡದ ಮಧ್ಯೆ ಘರ್ಷಣೆ ನಡೆದಿದ್ದು,ಪರಿಣಾಮ ಪರಿಸರದಲ್ಲಿ ಆತಂಕದ ವಾತಾವರಣ ಉಂಟಾಗಿದೆ.ಘಟನೆಯ ಹಿನ್ನಲೆಯಲ್ಲಿ ಕಲ್ಲಡ್ಕದಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿವೆ.ಮೇ.೨೬ ರಂದು ಘಟನೆಯ ಬಳಿಕ ಕಲ್ಲಡ್ಕದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.IMG-20170613-WA0007

IMG-20170613-WA0004

IMG-20170613-WA0005ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.ಅಲ್ಲದೆ ನಿಷೇದಾಜ್ಙೆಯನ್ನು ಮುಂದುವರಿಸಲಾಗಿತ್ತು.ಈನಡುವೆ ಘರ್ಷಣೆ ಮತ್ತೆ ಮುಂದುವರಿದಿರುವುದು ನಾಗರಿಕರ ಆತಂಕವನ್ನು ಹೆಚ್ಚಿಸಿದೆ.ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.ಇಬ್ಬರ ಮೇಲೆ ಸುಮಾರು 50ರಷ್ಟು ಇದ್ದ ತಂಡದಿಂದ ಹಲ್ಲೆ. ಸಿಕ್ಕಸಿಕ್ಕವರ ಮೇಲೆ ದಾಳಿ. ಪೊಲೀಸ್ ಎದುರೇ ಪುಂಡಾಟಿಕೆ ಎಂಬುದು ಪ್ರಾಥಮಿಕ ಮಾಹಿತಿ ಪೊಲೀಸರ ಮೇಲೂ ಕಲ್ಲು ತೂರಿದ್ದಾರೆಂದು ಹೇಳಲಾಗಿದೆ.ಪಂಚವಟಿ ಕಟ್ಟಡಕ್ಕೂ ನುಗ್ಗಿ ಹಿಂದೂ ಸಮುದಾಯದವರ ಅಂಗಡಿಯನ್ನು ಪುಡಿಗೈದ ಬಗ್ಗೆಯೂ ಮಾಹಿತಿ ಇದೆ.

By Suddi9

Leave a Reply

Your email address will not be published. Required fields are marked *