ಉಳ್ಳಾಲ: ಸುನ್ನೀ ಸೆಂಟರ್ ಅಳೇಕಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ  ಎಸ್ ವೈ ಎಸ್,ಎಸ್ಎಸ್ಎಫ್, ಎಸ್ ವಿ ಎಸ್ ವತಿಯಿಂದ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮ ದಿನಾಂಕ ಮೇ 26 ರಂದು ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಅಳೇಕಲದ ಸುನ್ನಿ ಸೆಂಟರ್ ನಲ್ಲಿ ನಡೆಯಿತು. IMG-20170607-WA0076

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಉಪಾಧ್ಯಕ್ಷ ರಿಯಾಝ್ ಅಳೇಕಲ ವಹಿಸಿದ್ದರು. ಇದೇ ಸಂದರ್ಭದಲ್ಲಿ ಇಮಾಮ್ ನವವಿ ಮದ್ರಸ ಸೌದಿ ಅರಬಿಯಾ ಇದರ ಮುದರ್ರಿಸ್ ಹನೀಫ್ ಸಅದಿ ಉಸ್ತಾದರು ರಮಝಾನ್ ಪೂರ್ವ ಸಿದ್ಧತೆ ಎಂಬ ವಿಷಯದಲ್ಲಿ ತರಗತಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಹಲವು ಬಡ ಕುಟುಂಬಕ್ಕೆ ರಮಝಾನ್ ಕಿಟ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಜಾಫರ್ ಮದನಿ ಉಸ್ತಾದ್, ಅಳೇಕಲ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಯು.ಡಿ, ಎಸ್ ಎಸ್ ಎಫ್ ಅಳೇಕಲ ಶಾಖೆಯ ಅಧ್ಯಕ್ಷರಾದ ಶಂಸುದ್ದೀನ್, ಪ್ರಧಾನ ಕಾರ್ಯದರ್ಶಿ ಆರಿಫ್, ಎಸ್ ವಿ ಎಸ್ ಅಧ್ಯಕ್ಷ ಝಾಹಿರ್ ತಂಙಳ್, ಪ್ರಧಾನ ಕಾರ್ಯದರ್ಶಿ ಶಫೀಖ್, ಫಾರುಕ್ ಯುಡಿ ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಶಂಸುದ್ದೀನ್ ಸ್ವಾಗತಿಸಿ ಫಾಝಿಲ್ ಅಳೇಕಲ ಧನ್ಯವಾದಗೈದರು.

By suddi9

Leave a Reply

Your email address will not be published. Required fields are marked *