ಬಂಟ್ವಾಳ: ಪಂಜಿಕಲ್ಲು ಗ್ರಾಮದ ಪುಂಚಮೆ ಎಂಬಲ್ಲಿನ ತೋಡೊಂದರಲ್ಲಿ ಹೆಣ್ಣು ಚಿರತೆಯೊಂದರ ಶವ ಗುರುವಾರ ಪತ್ತೆಯಾಗಿದೆ. ಚಿರತೆಯ ಶವವನ್ನು ಗಮನಿಸಿದ ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯ ಅಧಿಕಾರಿ ಹನುಮಂತಪ್ಪ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 2ರಿಂದ 3 ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದೆ.IMG-20170601-WA0006

IMG-20170601-WA0004

ಮೈಯಲ್ಲಿ ಯಾವುದೇ ಗಾಯದ ಗುರುತು ಇಲ್ಲ. ವಿಷ ತಿಂದು ಮೃತಪಟ್ಟಿರುವ ಲಕ್ಷಣವೂ ಕಾಣುತ್ತಿಲ್ಲ. ಹಾಗಾಗಿ ಚಿರತೆಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಚಿರತೆ ಸಹಜ ಅಥವಾ ಅಸಹಜವಾಗಿ ಸತ್ತಿದೆಯೇ ಎಂಬುದು ತಿಳಿದು ಬರಲಿದೆ ಎಂದು ಹನುಮಂತಪ್ಪ ತಿಳಿಸಿದ್ದಾರೆ. ಕಾಡು ಪ್ರಾಣಿಗಳ ಬೇಟೆಗೆಂದು ಯಾರೋ ಇಟ್ಟಿರುವ ವಿಷ ಸೇವಿಸಿ ಚಿರತೆ ಸತ್ತಿರಬೇಕೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *