ಬಂಟ್ವಾಳ :ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನಲ್ಲಿ ಸುಮಾರು 3 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಶ್ರೀ ಕಡಂಬಿಲ್ತಾಯಿ,ಕೊಡಮಣಿತ್ತಾಯಿ,ಶ್ರೀ ಬ್ರಹ್ಮಬದರ್ಕಳ ಗರಡಿ ಕ್ಷೇತ್ರ ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ಜರಗಿತು.ಬಳಿಕ ನಡೆದ ಧಾರ್ಮಿಕ ಸಮಾರಂಭದಲ್ಲಿ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮಕಾರ್ಯಗಳಲ್ಲಿ ಡಂಭಾಚಾರ ಸಲ್ಲದು.ನಿಷ್ಕಲ್ಮಶ ಅಂತರಾತ್ಮದಿಂದ ಭಾಗಿಗಳಾಗಬೇಕು ಎಂದ ಅವರು, ಅವರು ಒಂದೊಮ್ಮೆ ಕುಗ್ರಾಮವಾಗಿದ್ದ ಉಳಿ ಗ್ರಾಮ ಇಂದು ಅಭಿವೃದ್ಧಿ ಹೊಂದಿದೆ.ಮಾದರಿ ಗ್ರಾಮಕ್ಕೆ ಮಾದರಿಯಾಗಿ ಗರಡಿ ಪುನರುತ್ಥಾನಗೊಳ್ಳಬೇಕು ಎಂದು ಹೇಳಿದರು.

3 (1)
ಕಂಕನಾಡಿ ಗರಡಿಯ ಅಧ್ಯಕ್ಷ ಚಿತ್ತರಂಜನ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಮಹಾವೀರ ಅಜ್ರಿ,ಬಂಟ್ವಾಳ ತಾಲೂಕು ಬಿಲ್ಲವರ ಸಮಾಜ ಸೇವಾ ಸಂಘ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್,ಉದ್ಯಮಿ ರಾಜವೀರ ಜೈನ್, ಸುಬ್ರಹ್ಮಣ್ಯಉದ್ಯಮಿ ರವಿಕಕ್ಯಪದವು,ಬೆಳ್ತಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ,ಉಳಿ ಗ್ರಾ.ಪಂ.ಅಧ್ಯಕ್ಷೆ ದೀನಾಕ್ಷಿ ಮಲ್ಯೋಡಿ,ನಿವೃತ್ತ ಮಖ್ಯ ಶಿಕ್ಷಕ ಬಾಬು ಮಾಸ್ತರ್ ಕೋಂಗುಜೆ,ಉದ್ಯಮಿ ರವಿ ಚಿಲಿಂಬಿ,ಉಳಿ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಭಟ್ ,ಪ್ರಗತಿಪರ ಕೃಷಿಕ ಬಟ್ಯಪ್ಪ ಪೂಜಾರಿ,ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ವೇದಿಕೆಯಲ್ಲಿದ್ದರು.6 (1)

ಇದೇ ಸಂದರ್ಭದಲ್ಲಿ ಕ್ಷೇತ್ರಕ್ಕೆ ಪ್ರಥಮ ನಿಧಿಯನ್ನು ಮಂಗಳೂರು ಉದ್ಯಮಿ ದಿವಾಕರ ನಿಡ್ಯೇಲು ಹಾಗೂ ಕಮಲ ಪೂಜಾರ್ತಿ ಮತ್ತು ರವಿಕಕ್ಯಪದವು ಅವರು ಸಮರ್ಪಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡ್ತಾಯ ಹಾಗೂ ರಾಜೇಂದ್ರ ಅರ್ಮುಡ್ತಾಯ ಅವರು ಶಿಲಾನ್ಯಾಸದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.ಪುನರ್ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ರೋಹಿನಾಥ ಪಾದೆ ಅವರು ಸ್ವಾಗತಿಸಿದರು.ಉಪಾಧ್ಯಕ್ಷ ಕೆ.ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಸ್ತಾವಿಸಿದರು.ಉಸ್ತುವಾರಿ ಸಮಿತಿ ಅಧ್ಯಕ್ಷ ಎ.ಚೆನ್ನಪ್ಪ ಸಾಲ್ಯಾನ್ ವಂದಿಸಿದರು.ಉಪನ್ಯಾಸಕ ಶರತ್ ಕುಮಾರ್ ಕೇದಿಗೆ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *