ಮೂಡುಬಿದಿರೆ : ಕಳೆದ ಆರು ವರ್ಷಗಳಿಂದ ನೀರಿನ ಬಿಲ್ಲನ್ನು ಪುರಸಭೆಗೆ ಪಾವತಿಸದೆ ಬಾಕಿ ಇಟ್ಟಿರುವ ಹಿನ್ನಲೆಯಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಹೋಗಿದ್ದ ಪುರಸಭಾ ಸಿಬಂದಿಗಳ ಕರ್ತವ್ಯಕ್ಕೆ ವ್ಯಕ್ತಿಯೋರ್ವ ಅಡ್ಡಿ ಪಡಿಸಿ ಹಲ್ಲೆಗೆ ಯತ್ನಿಸಿದ ಘಟನೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕೋಟೆಬಾಗಿಲಿನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ನಡೆದಿದೆ.tmc (1)

ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನ ಪಿ.ಹೆಚ್ ಅಬೂಬಕ್ಕರ್ ಅವರು ಪುರಸಭಾ ಸಿಬಂದಿಗಳಾದ ಆನಂದ ಬಾಬು ಮತ್ತು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಗಳಾದ ಕಾರ್ತಿಕ್, ರಮೇಶ್, ರವಿರಾಜ್ ಹಾಗೂ ಪ್ಲಂಬರ್ ಫಿರೋಜ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ. ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಬಿಲ್ಲು ಪಾವತಿಸದ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಈ ಸಂದರ್ಭ ಮಂಗಳವಾರದಂದು ಪುರಸಭೆಯ ವಾಟರ್ ಸಪ್ಲೈ ಹುದ್ದೆಯನ್ನು ನಿರ್ವಹಿಸುತ್ತಿರುವ ಆನಂದ ಬಾಬು ಅವರು ಸಿಬಂದಿಗಳ ಜತೆಗೂಡಿ ನೀರಿನ ಬಿಲ್ಲ್ ಪಾವತಿಸದೆ ಸುಮಾರು 38,405ರೂ ಬಾಕಿ ಇಟ್ಟಿರುವ ಕೋಟೆಬಾಗಿಲಿನ ನೀರಿನ ಸಂಪರ್ಕ ಸಂಖ್ಯೆ 2592ರ ಅಬೂಬಕ್ಕರ್ ಎಂಬವರ ಮನೆಯ ಸಂಪರ್ಕವನ್ನು ಕಡಿತಗೊಳಿಸಲು ತರಳಿದಾಗ ಅವರು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆನ್ನಲಾಗಿದೆ.

ಈ ರೀತಿ ಸಾರ್ವಜನಿಕ ವ್ಯಕ್ತಿ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಪ್ರಾಣ ಬೆದರಿಕೆಯನ್ನು ನೀಡಿರುವುದರಿಂದ ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಹಲ್ಲೆಗೆ ಯತ್ನಿಸಿದ ಘಟನೆಗೆ ಸಬಂಧಿಸಿದಂತೆ ಪುರಸಭಾ ಸಿಬಂದಿಗಳು ಸಂಜೆವರೆಗೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸದೆ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ ಘಟನೆಯೂ ನಡೆಯಿತು.ನಂತರ ಪೊಲೀಸರಿಗೆ ದೂರು ನೀಡಿದ ನಂತರ ಸಿಬಂದಿಗಳು ಕರ್ತವ್ಯವನ್ನು ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *