ದಿನಾಂಕ: 20-6-2014ರಂದು 14-30 ಗಂಟೆಗೆ ಪುರುಷೋತ್ತಮ ಶೆಟ್ಟಿ,(57), ತಂದೆ: ಅಪ್ಪಯ್ಯ ಶೆಟ್ಟಿ, ವಾಸ: ಸೌಬಾಗ್ಯ ಗಣೇಶ್ ಬಾಗ್, ನೆಹರೂ ನಗರ, ಪುತ್ತೂರು ಎಂಬವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಮಗನಾದ ಗೌತಮನು ದಿನಾಂಕ: 19-6-2014 ರಂದು ಬೆಳಿಗ್ಗೆ 8.00 ಗಂಟೆಗೆ ದೊಡ್ಡಪ್ಪನ ಮನೆಯಾದ ಅನಂತಾಡಿಯಿಂದ ಅಣ್ಣ ರಾಮ ಪ್ರಸಾದ್ ನೊಂದಿಗೆ ಮಂಗಳೂರಿಗೆ ಕೆಲಸಕ್ಕೆ ಹೋಗುವಾಗ ಕಲ್ಲಡ್ಕದಲ್ಲಿ ಗೌತಮನು ಕಾರಿನಿಂದ ಇಳಿದು ಪುತ್ತೂರಿಗೆ ಹೋಗುತ್ತೇನೆಂದು ಹೇಳಿ ಹೋದವ ತನ್ನ ಮನೆಯಾದ ಪುತ್ತೂರಿಗೂ ಹೋಗದೇ ಕೆಲಸಕ್ಕೂ ಹೋಗದೇ ಕಾಣೆಯಾಗಿರುತ್ತಾನೆ. ಎಂಬಿತ್ಯದಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 195/14 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Gautham

ಕಾಣೆಯಾದ ಗಂಡಸಿನ ಚಹರೆ:
ಹೆಸರು: ಗೌತಮ್
ಪ್ರಾಯ : 20 ವರ್ಷ.
ಮೈಬಣ್ಣ: ಬಿಳಿಮೈಬಣ್ಣ, ಕನ್ನಡಕ ಇಟ್ಟಿರುತ್ತಾನೆ.
ಬಟ್ಟೆ: ನೀಲಿ ಬಣ್ಣದ ಗೆರೆಯ ಶೆಟ್ರ್ , ಕಪ್ಪು ಪ್ಯಾಂಟ್
ಬಾಷೆ: ಕನ್ನಡ, ತುಳು, ಇಂಗ್ಲೀಷ್

ಬಂಟ್ವಾಳ ನಗರ ಪೊಲೀಸ್ ಠಾಣೆ (ದೂರವಾಣಿ 08255-232111), ಪೊಲೀಸ್ ವೃತ್ತ ನಿರೀಕ್ಷಕರು ಬಂಟ್ವಾಳ ವೃತ್ತ (ದೂರವಾಣಿ 08255-235000) ಸಂಪರ್ಕಿಸುವರೇ ಕೋರಲಾಗಿದೆ.

By suddi9

Leave a Reply

Your email address will not be published. Required fields are marked *