ಬಂಟ್ವಾಳ: ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಶ್ರೀಮಠ್ ಸಂಸ್ಥಾನ್ ದಾಭೋಲಿಯ ಸಂಜೀವಿನಿ ಸಮಾಧಿಸ್ಥ ಮಠಾಧೀಶ ಶ್ರೀ ಪೂರ್ಣಾನಂದ ಸ್ವಾಮಿ ಮಹಾರಾಜ್ ಅವರ ಪವಿತ್ರ ಪಾದುಕೆಗಳೊಂದಿಗೆ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಅವರು ದ.ಕ. ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಬಂಟ್ವಾಳಕ್ಕೆ ಮೇ.31ರಂದು ಚಿತ್ತೈಸಲಿದ್ದಾರೆ.ಜಿಲ್ಲಾ ಪ್ರವಾಸ ನಿಮಿತ್ತ ರಚಿಸಲಾದ ಸ್ವಾಗತ ಸಮಿತಿ ಉಪಾಧ್ಯಕ್ಷ ರಾಜಾರಾಮ ನಾಯಕ್ ಕಲಾಯಿ ಈ ವಿಷಯವನ್ನು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.press

31ರಂದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಚಿತ್ತೈಸಲಿರುವ ಶ್ರೀಗಳ ಸ್ವಾಗತ ಮೆರವಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ನಡೆಯಲಿದೆ. ಬೆಳಗ್ಗೆ 8.30ಕ್ಕೆ ವಿವಿಧ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಕಲ್ಲಡ್ಕದ ಮೀನಾಕ್ಷಿ ಕಲಾಮಂದಿರಕ್ಕೆ ಮೇ.30ರಂದು ಆಗಮಿಸಿ ಆಶೀರ್ವಚನ ನೀಡುವ ಶ್ರೀಗಳು ಬಳಿಕ ಮರುದಿನ 31ರಂದು ಬಂಟ್ವಾಳಕ್ಕೆ ಆಗಮಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಾಬೋಲಿ ಮಠದ ಟ್ರಸ್ಟಿ ರವೀಂದ್ರ ನಾಯಕ್, ಪ್ರಮುಖರಾದ ಮುರಳೀಧರ ಪ್ರಭು, ವೆಂಕಟ್ರಾಯ ಪ್ರಭು, ಚಂದ್ರಶೇಖರ ಪ್ರಭು, ಗಣಪತಿ ಶೆಣೈ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *