ಬಂಟ್ವಾಳ: ಕರ್ನಾಟಕ ಸರಕಾರದ “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿ ಕೇಪು ಗ್ರಾಮದ ನೀರ್ಕಜೆ- ಕಟ್ಟೆ ರಸ್ತೆ ಅಭಿವೃದ್ಧಿ ಕೆಲಸದ ಶಿಲನ್ಯಾಸ ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಶೇತ್ರದ ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಟಿ.ಶಕುಂತಳಾ ಶೆಟ್ಟಿ ನೆರವೇರಿಸಿದರು.

KEPU NEWS2ಕಾರ್ಯಕ್ರಮದಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜಯಶ್ರೀ ಕೋಡಂದೂರು, ಎಮ್.ಎಸ್. ಮಹಮ್ಮದ್, ಗ್ರಾಮ ಪಂಚಾಯತ್ ಅಧ್ಯಕ್ಷ ತಾರನಾಥ ಆಳ್ವ, ಗ್ರಾಮ ಪಂಚಾಯತ್ ಸದಸ್ಯ ಕರೀಮ್ ಕುದ್ದುಪದವು, ಗ್ರಾ.ಪ. ಸದಸ್ಯ ಹರೀಶ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಇಂಟೆಕ್ ಅಧ್ಯಕ್ಷ ರಮನಾಥ್ ವಿಟ್ಲ, ಬೂತ್ ಕಮಿಟಿ ಅಧ್ಯಕ್ಷ ಸುಧಾಕರ್ ಬಡೆಕ್ಕೊಡಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು. ಯೋಜನೆಯನ್ನು ಆದಷ್ಟು ಬೇಗ ಮುಗಿಸುವಂತೆ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು, ಕೇಪು ಉಳ್ಳಾಲ್ತಿ ದೇವಸ್ಥಾನದ ರಸ್ತೆಯ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಶಾಶ್ವತ ಪರಿಹಾರ, ಹಾಗೂ ಮರು ಡಾಮರೀಕರಣ ಮಾಡಿಸುವುದಾಗಿ ಗ್ರಾಮಸ್ಥರಿಗೆ ಭರವಸೆಯನ್ನು ನೀಡಿದರು.

By Suddi9

Leave a Reply

Your email address will not be published. Required fields are marked *