ಬಂಟ್ವಾಳ: ಎಸ್.ಎಸ್.ಎಫ್., ಎಸ್.ವೈ.ಎಸ್., ಎಸ್.ಎಸ್.ಎಫ್ ಕ್ಯಾಂಪಸ್ ಕುಕ್ಕಾಜೆ ಇದರ ವತಿಯಿಂದ ಮೇ 23 ರಂದು ರಾತ್ರಿ ಕುಕ್ಕಾಜೆ ಜಂಕ್ಷನ್ ನಲ್ಲಿ ರಂಝಾನ್ ಸಿದ್ದತಾ ಅಧ್ಯಯನ ತರಬೇತಿ ನಡೆಯಿತು. ಎಸ್.ಎಸ್.ಎಫ್ ಕಾಸರಗೋಡು ಜಿಲ್ಲೆಯ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ರಂಝಾನ್ ಸಿದ್ದತೆ ಬಗ್ಗೆ ಉದ್ಭೋಧನೆ ನೀಡಿದರು.SSF KUKKAJE (1)

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕಾಜೆ ಎಸ್.ವೈ.ಎಸ್ ಅಧ್ಯಕ್ಷ ಮೊಯಿದು ಕುಂಞ ವಹಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಅಥಿತಿಗಳಾಗಿ ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕುಕ್ಕಾಜೆ ಎಸ್.ಎಸ್.ಎಫ್ ಅಧ್ಯಕ್ಷ ಹಂಝ ಝುಹ್ರಿ ಸ್ವಾಗತಿಸಿ ಎಸ್.ಎಸ್.ಎಫ್ ಕ್ಯಾಂಪಸ್ ಕಾರ್ಯದರ್ಶಿ ಲುಕ್ಮಾನುಲ್ ಹಕೀಂ ವಂದಿಸಿದರು.

By Suddi9

Leave a Reply

Your email address will not be published. Required fields are marked *