ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ.ಸಿರಾಜ್ ಅಡ್ಕರೆ ಮಾತನಾಡಿ 14-05-2017ರಂದು ಸರಿತ(34) ಎಂಬುವವರು ಸಂಶಯಾಸ್ಪದ ರೀತಿಯಲ್ಲಿ ಮರಣ ಹೊಂದಿದ್ದು ಈ ಬಗ್ಗೆ ಗೃಹಿಣಿಯ ಹೆತ್ತವರು ಬೇರೆ ಮೂಲಗಳಿಂದ ಸಿಕ್ಕಿದ ಮಾಹಿತಿಯನ್ವಯ ಘಟನಾ ಸ್ಥಳಕ್ಕೆ ತೆರಳಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹವು ಕಂಡು ಬಂದಿದ್ದು ಸಂಶಯಾಸ್ಪದ ರೀತಿಯಲ್ಲಿ ಕಿಟಕಿಗೆ ನೇಣು ಬಿಗಿದು ನೆಲಕ್ಕೆ ಸಾಮಿಪ್ಯ ಮೃತ ದೇಹದ ಕಾಲು ಇದ್ದು ಯಾವುದೇ ಆತ್ಮಹತ್ಯೆ ಮಾಡಿದ ಹಾಗೆ ಮೃತ ದೇಹ ಕಂಡು ಬಂದಿಲ್ಲ ಇದೊಂದು ಪೂರ್ವ ಯೋಜಿತ ಕೃತ್ಯ ಹಾಗಾಗಿ ಸ್ಥಳದಲ್ಲಿದ್ದ ಮಂಜೇಶ್ವರ ಠಾಣ ನಿರೀಕ್ಷಕರಿಗೆ ಗೃಹಿಣಿಯ ಹೆತ್ತವರು ಸಂಶಯ ವ್ಯಕ್ತ ಪಡಿಸಿದಾಗ ಸದ್ರಿ ಪೋಲಿಸ್ ಅಧಿಕಾರಿ ಸೂಕ್ತವಾದ ಸ್ಪಂದನೆ ನೀಡದೆ ನಾಳೆ ಪೋಲಿಸ್ ಠಾಣೆಗೆ ಬನ್ನಿ ನಂತರ ಮಾತಾಡುವ ಎಂದು ಹೇಳಿದರು.ಆದರೆ ನಂತರ ಮರು ದಿವಸ ಪೋನ್ ಮಾಡಿದಾಗ ನಾನು ರಜೆಯಲ್ಲಿದ್ದೇನೆ ನಾಳೆ ಬನ್ನಿ ಎಂದು ಇನ್ನೊಮ್ಮೆ ಹೇಳಿರುತ್ತಾರೆ. ಈ ಬಗ್ಗೆ ಬೇಸರಗೊಂಡ ಗೃಹಿಣಿಯ ಹೆತ್ತವರು ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುತ್ತಾರ್‍ರವರ ಮೂಲಕ ತು.ರ.ವೇ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪುರವರನ್ನು ಸಂಪರ್ಕಿಸಿ ಈ ಬಗ್ಗೆ ಹೋರಾಟ ಮಾಡಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಬರವಣಿಗೆ ಮೂಲಕ ದೂರನ್ನು ನೀಡಿರುತ್ತಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ತು.ರ.ವೇ ಸ್ಥಾಪಕಾಧ್ಯಕ್ಷರು ಕೂಡಲೆ ತು.ರ.ವೇ ಕೇಂದ್ರೀಯ ಮಂಡಳಿ ಪಧಾದಿಕಾರಿಗಳ ಜೊತೆಗೆ ಮಂಜೇಶ್ವರ ಪೋಲಿಸ್ ಠಾಣೆಗೆ ತೆರಳಿ ದೂರನ್ನು ಸ್ವೀಕರಿಸುವಂತೆ ಆಗ್ರಹಿಸಿದರು. ದೂರು ಸ್ವೀಕರಿಸುವ ಸಂದರ್ಭದಲ್ಲಿ ಮಲೆಯಾಲ ಭಾಷೆಯಲ್ಲಿ ದೂರನ್ನು ನೀಡಬೇಕೆಂದು ಅಲ್ಲಿನ ಪೋಲಿಸ್ ಅಧಿಕಾರಿಗಳು ಹೇಳುವ ಮೂಲಕ ಇನ್ನೊಮ್ಮೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೆ ಇದ್ದೂದು ನಮ್ಮ ಗಮನಕ್ಕೆ ಬಂದಿರುತ್ತದೆ. ಅನಂತರ ಅವರು ನಮ್ಮ ದೂರನ್ನು ಸ್ವೀಕರಿಸಿದರು. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಲು ತುಳುನಾಡ ರಕ್ಷಣಾ ವೇದಿಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಸಲುವಾಗಿ ಮತ್ತು ಸರಿಯಾದ ತನಿಖೆ ಆಗದೇ ಇದ್ದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಮಾತನಾಡಿದ ಯುವತಿಯ ತಮ್ಮ ಸಂತೋಷ್ ಬಿ.ಎಸ್ ಇದೊಂದು ವ್ಯವಸ್ಥಿತ ಕೃತ್ಯವೆಂದು ನಮಗೆ ಸಂಶಯವಿದೆ ನಮ್ಮ ಅಕ್ಕ ಸರಿತ ನಮಗೆ ಬುದ್ಧಿವಾದ ಮಾಡುತಿದ್ದ ವ್ಯಕ್ತಿ ಮಾನಸಿಕವಾಗಿ ಅತ್ಯಂತ ಪ್ರಬುದ್ಧತೆಯನ್ನು ಹೊಂದಿದ್ದು ಆತ್ಮಹತ್ಯೆಯ ಆಲೋಚನೆಯನ್ನೇ ಮಾಡುವವಳಲ್ಲ ಹಾಗಾಗಿ ಇಲ್ಲಿ ಆತ್ಮಹತ್ಯೆಯ ಪ್ರಶ್ನೆಯೇ ಬರುವುದಿಲ್ಲ ಎಂದರು.ಈ ಬಗ್ಗೆ ಕೂಡಲೇ ನಮ್ಮ ಸಂಶಯವನ್ನು ನಿವಾರಿಸ ಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ತುಳುನಾಡ ರಕ್ಷಣಾ ವೇದಿಕೆಯ ಮೂಲಕ ವಿನಂತಿಸಿಕೊಳ್ಳುತಿದ್ದೇವೆ.ನಂತರ ಮಾತನಾಡಿದ ಗೃಹಿಣಿಯ ಅಕ್ಕ ಮೀಣಾ ಮೋಹನ್ ಮಾತನಾಡಿ ನನ್ನ ತಂಗಿ ಮರಣ ಹೊಂದುವ ಸುಮಾರು ಒಂದು ವಾರದ ಹಿಂದೆ ನನಗೆ ಕರೆ ಮಾಡಿದ್ದು ಆಕೆಯ ಪತಿಯು ಕಿರುಕುಳ ನೀಡುತಿದ್ದು ಆಕೆಯ ಬಗ್ಗೆ ಪತಿಯು ಸಂಶಯದ ರೀತಿಯಲ್ಲಿ ಮಾತನಾಡಿ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆಯನ್ನು ನೀಡುತ್ತಿರುವುದಾಗಿ ತಿಳಿಸಿದ್ದರು.ನನಗೆ ಬದುಕುವ ಆಸೆ ಇದೆ ಎಮದು ತಿಳಿಸಿದ್ದರು. ಮುಂದಿನ ರವಿವಾರ ತವರು ಮನೆಗೆ ಆಗಮಿಸುವುದಾಗಿ ತಿಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಇದೀಗ ಆಕೆ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ನಮಗೆ ಅದರ ಬಗ್ಗೆ ಸಂಶಯವಿದೆ ಹಾಗೂ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತು.ರ.ವೇ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುತ್ತಾರ್, ಗೃಹಿಣಿಯ ತಂದೆ ಶಿವಪ್ಪ ಬಿ.ಎ, ಮೋಹನ್ ಆಡಿನಾಡೂರು ಉಪಸ್ಥಿತರಿದ್ದರು.
