ಸುದ್ದಿ9ಕೈಕಂಬ: `ಕಳೆದ ತಿಂಗಳು ಜೂನ್ 9ರಂದು ಕಾಣೆಯಾಗಿದ್ದ ಕೃಷ್ಣಾಪುರದ ಏಳನೇ ಬ್ಲಾಕ್ನ ಉಮಾ(21) ಎಂಬಾಕೆ ಏನಾದಳು, ಎಲ್ಲಿ ಹೋದಳು?’
ಇದು ಸುರತ್ಕಲ್ ಪೊಲೀಸರನ್ನು ಹಾಗೂ ಉಮಾಳ ಮನೆಯವರನ್ನು ಕಾಡುತ್ತಿರುವ ಪ್ರಶ್ನೆ.

suratkal_missing

ತನ್ನ ಅಮ್ಮನ ತಮ್ಮನೊಂದಿಗೆ ಮನೆಬಿಟ್ಟು ತೆರಳಿದ ಉತ್ತರ ಕನರ್ಾಟಕ ಮೂಲದ ದುರ್ಗಮ್ಮ ಎಂಬವರ ಪುತ್ರಿ ಉಮಾಳನ್ನು ಪೊಲೀಸರು ಗಲ್ಲಿ ಗಲ್ಲಿ ಹುಡುಕಿಯಾಯ್ತು. ಊಹೂಂ ಉಮಾ ಪತ್ತೆಯಿಲ್ಲ.
ಕಳೆದ ತಿಂಗಳ: ಜೂನ್ 9ರಂದು ಕಂಪ್ಯೂಟರ್ ಕಲಿಯುತ್ತೇನೆಂದು ಹೋದವಳು ಸಂಜೆಯಾದಗ ತಾನು ಚಿಕ್ಕಮ್ಮನ ಮನೆಯಲ್ಲಿರುವುದಾಗಿ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದಳು. ಅಲ್ಲದೆ ದುರ್ಗಮ್ಮನ ಸೋದರ ಉಮಾ ತನ್ನ ಬಳಿ ಇದ್ದಾಳೆ ಎಂದು ಹೇಳಿದ್ದ. ಆದರೆ ಇತ್ತೀಚೆಗೆ ಅವರಿಬ್ಬರ ಮೊಬೈಲ್ಗಳೂ ಸ್ವಿಚ್ಡ್ ಆಫ್ ಆಗಿದೆ.
ಕಳೆದ ಒಂದು ತಿಂಗಳಿನಿಂದ ಮರೀಚಿಕೆಯಾದ ಉಮಾ ಹಾಗೂ ಉಮಾ ಮಾವ ಸಿಕ್ಕಿದರೆ 100 ನಂಬರ್ಗೆ ಕರೆ ಮಾಡಿ ಎಂದು ಪೊಲೀಸರು ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *