ಮೂಡುಬಿದಿರೆ: ರಾಜ್ಯದಲ್ಲಿ ಗರಿಷ್ಠ ಪಿಯುಸಿ ವಿದ್ಯಾರ್ಥಿಗಳನ್ನು ಹೊಂದಿರುವ ಹಿರಿಮೆಯ ಆಳ್ವಾಸ್ ಪದವಿ ಪೂರ್ವ ಕಾಲೇಜು ಸೇ 98.66 ಫಲಿತಾಂಶ ದಾಖಲಿಸಿದೆ. ಟಾಪ್ ಟೆನ್ ವಿದ್ಯಾರ್ಥಿಗಳ ಸಾಲಿನಲ್ಲಿ ಕಾಮರ್ಸ್ನ ಸ್ಪಂದನ (594) 2ನೇ ರ್ಯಾಂಕ್ ಸಹಿತ ಆಳ್ವಾಸ್ನ ಐದು ಮಂದಿ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.
ಕಾಮರ್ಸ್ನ ಅನಿತಾ, ಸ್ವಾತಿ (ತಲಾ 593 ಅಂಕಗಳು) ವಿಜ್ಞಾನ ವಿಭಾಗದಲ್ಲಿ ನಿಹಾರಿಕಾ ಮತ್ತು ಮಹಾಗುಂಡಯ್ಯ ವಸ್ತದ (ತಲಾ 594)ಅಂಕಗಳೊಂದಿಗೆ ಟಾಪ್ಟೆನ್ನಲ್ಲಿ ಸ್ಥಾನ ಪಡೆದಿದ್ದಾರೆ.
ಒಟ್ಟು 5241 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 5171 ಮಂದಿ ಉತೀರ್ಣರಾಗಿದ್ದು ಶೇ 98.66 ಫಲಿತಾಂಶ ಲಭಿಸಿದೆ. ಆಳ್ವಾಸ್ನಿಂದ 2193 ವಿದ್ಯಾರ್ಥಿಗಳು ಶೇ 85ಕ್ಕೂ ಹೆಚ್ಚಿನ ಫಲಿತಾಂಶ ಪಡೆದಿರುವುದು, 21 ಮಂದಿ 590ಕ್ಕೂ ಮಿಕ್ಕಿದ ಅಂಕಗಳನ್ನು ಗಳಿಸಿರುವುದು ಹಾಗೂ 417 ಮಂದಿ ವಿದ್ಯಾರ್ಥಿಗಳು ತಲಾ 570ಕ್ಕೂ ಅಧಿಕ ಅಂಕಗಳಿಸಿರುವುದು ದಾಖಲೆಯಾಗಿದೆ.
ಕಲಾ ವಿಭಾಗದಲ್ಲಿ ಅಂಧ ವಿದ್ಯಾರ್ಥಿ ಪ್ರಕಾಶ್ ಬಲಗಣ್ಣೂರು (553) ವಾಣಿಜ್ಯ ವಿಭಾಗದಲ್ಲಿ ಪೊಲೀಯೋ ಪೀಡಿತ ದೀಕ್ಷಿತ್ ಶೆಟ್ಟಿ(573) ಅಂಕಗಳನ್ನು ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ. ಫಿಸಿಕ್ಸ್ (181) ಗಣಿತ (152) ಸಂಖ್ಯಾಶಾಸ್ತ್ರ (95) ಗಣಕ ವಿಜ್ಞಾನ (95) ವ್ಯವಹಾರ ಅಧ್ಯಯನ (57) ಅಕೌಂಟೆನ್ಸಿ (74) ಬಯೋಲಜಿ(37) ಎಲೆಕ್ಟ್ರಾನಿಕ್ಸ್ (39) ಸಂಸ್ಕøತ(16) ಬೇಸಿಕ್ ಮ್ಯಾತ್ಸ್( 14) ಕನ್ನಡ (5) ವಿಷಯಗಳಲ್ಲಿ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.

ಕ್ರೀಡಾ ವಿಭಾಗದ 95ರ ಪೈಕಿ 90 ವಿದ್ಯಾರ್ಥಿಗಳು ಉತೀರ್ಣರಾಗಿದ್ದು ಹೈಜಂಪ್ನ ರಾಷ್ಟ್ರೀಯ ಕ್ರೀಡಾ ಪಟು ಅಭಿನಯ ಶೆಟ್ಟಿ (ಶೇ93.83) ರಾಜ್ಯಮಟ್ಟದ ಕ್ರೀಡಾಪಟು ಕಾಮರ್ಸ್ನ ನಿಶಿತ್ ಎನ್. ರಾವ್ (ಶೇ 93.83) ಉತ್ತಮ ಸಾಧನೆ ದಾಖಲಿಸಿದ್ದಾರೆ. ಆಳ್ವಾಸ್ನ ದತ್ತು ಸ್ವೀಕಾರ ಯೋಜನೆಯಡಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಹಾಗೂ ಒಟ್ಟಾರೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡಿದ್ದಾರೆ ಎಂದು ಆಳ್ವಾಸ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಕಾಮರ್ಸ್ನ ಸ್ಪಂದನ (594) 2ನೇ ರ್ಯಾಂಕ್ ಸಹಿತ ಕಾಮರ್ಸ್ನ ಅನಿತಾ, ಸ್ವಾತಿ (ತಲಾ 593 ಅಂಕಗಳು) ವಿಜ್ಞಾನ ವಿಭಾಗದಲ್ಲಿ ನಿಹಾರಿಕಾ ಮತ್ತು ಮಹಾಗುಂಡಯ್ಯ ವಸ್ತದ (ತಲಾ 594)
ಚಾರ್ಟೆಡ್ ಅಕೌಂಟೆಟ್ ಆಗುವಾಸೆ: ಸ್ಪಂದನಾ
ಮೂಡುಬಿದಿರೆ: ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸಿ ದ್ವಿತೀಯ ರ್ಯಾಂಕ್ ಗಳಿಸಿರುವ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ ಚಾರ್ಟೆಡ್ ಅಕೌಂಟೆಟ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಬೇಕರಿ ಉದ್ಯಮಿ ವಿಜಯ ಕುಮಾರ್ ಹಾಗೂ ಗೃಹಿಣಿ ಭಾರತಿ ದಂಪತಿಯ ಪುತ್ರಿಯಾಗಿರುವ ಈಕೆ ಆಳ್ವಾಸ್ನಲ್ಲಿ ಉಚಿತ ದತ್ತು ಸ್ವೀಕಾರ ಯೋಜನೆಯಡಿ ಶಿಕ್ಷಣ ಪಡೆದಿದ್ದರು.
ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿರುವ ಈಕೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹಾಗೂ ಇಲ್ಲಿನ ಅಧ್ಯಾಪಕ ವೃಂದ ತಮ್ಮ ಮೇಲೆ ವೈಯಕ್ತಿಕ ಗಮನಹರಿಸಿ ಕಲಿಕೆಗೆ ಪ್ರೋತ್ಸಾಹ ನೀಡಿರುವುದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
