ಬಂಟ್ವಾಳ : ಜೆ ಎಂ ಎಫ್ ಸಿ ಮತ್ತು ಪ್ರಿನ್ಸಿಪಲ್ ಮುನ್ಸಿಪರ್ ಆಗಿ 3ವರ್ಷದಿಂದ ಸೇವೆ ಸಲ್ಲಿಸಿದ ಮಹೇಶ್ ಆರ್. ರವರು ಹೊಳೆನರಸೀಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಸಂದರ್ಭದಲ್ಲಿ ವಕೀಲರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಜರಗಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಯು. , ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ, ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಆಲಿ, ವಕೀಲರು ಗಳಾದ ಗಣೇಶಾನಂದ ಸೋಮಯಾಜಿ, ರಮಾನಾಥ ಕಾರಂದೂರು , ಆಶ್ವನಿ ಕುಮಾರ್ ರೈ., ಕಜೆ ರಾಮಚಂದ್ರ ಭಟ್, ಉಪಾಧ್ಯಕ್ಷ ಸುರೇಶ್ ಕುಮಾರ್ ನಾವೂರು, ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್, ಜತೆ ಕಾರ್ಯದರ್ಶಿ ವಿನೋದ ಎಸ್. ಮತ್ತಿತರರು ಉಪಸ್ಥಿತರಿದ್ದರು.
