ಕೈಕಂಬ: ಧರ್ಮದೈವಗಳನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿದಾಗ ದೈವಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು. ಅವರು ಕರಿಯಂಗಳ ಶ್ರೀ ವ್ಯಾಘ್ರ ಚಾಮುಂಡಿ ಸಪರಿವಾರ ದೈವಸ್ಥಾನದ ನೂತನ ಸುತ್ತುಪೌಳಿ ಸಮರ್ಪಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸುತ್ತುಪೌಳಿಯ ಉದ್ಘಟನೆಯನ್ನು ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ನೆರವೇರಿಸಿದರು.
ಅಧ್ಯಕ್ಷತೆಯನ್ನು ಪರಿಸರ ಮತ್ತು ಅರಣ್ಯ ಸಚಿವ ಬಿ.ರಮಾನಾಥ ರೈ ವಹಿಸಿದ್ದರು. ದಿಕ್ಸೂಚಿ ಭಾಷಣವನ್ನು ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನ ಉಪನ್ಯಾಸಕ ಗಣೇಶ್ ಅಮೀನ್ ಸಂಕಮಾರ್ ಮಾಡಿದರು. ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯನಂದ, ಕೆ.ಸತೀಶ್ ಶೆಟ್ಟಿ ಕರಿಯಂಗಳ ಗುತ್ತು, ದ.ಕ.ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಶುಭ ಬೀಡಿ ಮಾಲಕ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಮಾಜಿ ಅಧ್ಯಕ್ಷ ತುಳು ಸಾಹಿತ್ಯ ಅಕಾಡೆಮಿ ಮತ್ತು ಜಿಲ್ಲಾ ಬಿ.ಜೆ.ಪಿ. ಪ್ರ ಕಾರ್ಯದರ್ಶಿ ಉಮನಾಥ ಕೋಟ್ಯಾನ್, ತಾ.ಪಂ.ಸದಸ್ಯ ಯಶವಂತ ಪೂಜಾರಿ ಪೊಳಲಿ, ಉದ್ಯಮಿ ಜಯರಾಮ ಕೃಷ್ಣ ಪೊಳಲಿ, ಚಂದ್ರಹಾಸ ಪಲ್ಲಿಪಾಡಿ, ರಾಜು ಕೋಟ್ಯಾನ್ ಗರೋಡಿ, ಉಮೇಶ್ ಆಚಾರ್ಯ, ಗ್ರಾ.ಪಂ.ಸದಸ್ಯೆ ಶಶಿಕಲಾ ನಡೆಮನೆ, ಗ್ರಾ,ಪಂ,ಸದಸ್ಯ ಕಿಶೋರ್ ಪಲ್ಲಿಪಾಡಿ, ಉಪಸ್ಥಿತರಿದ್ದರು. 
ವ್ಯಾಘ್ರಚಾಮುಂಡಿ ಸಪರಿವಾರ ದೈವಸ್ಥಾನದ ಸುತ್ತುಪೌಳಿಗೆ ಸಚಿವ ರಮಾನಾಥ ರಯ ಹಾಗೂ ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಇವರು ರೂ. 2 ಲಕ್ಷ ಮೊತ್ತ ವನ್ನು ಹಿರಿಯರಾದ ಗಂಗಯ್ಯ ಪೂಜಾರಿ, ರಾಜು ಪೂಜಾರಿ, ಗೋಪಾಲ ಪೂಜಾರಿಯವರಿಗೆ ಪದಾಧಿಕಾರಿಗಳ ಸಮಾಕ್ಷಮದಲ್ಲಿ ನೀಡಿದರು.
ಇದೇ ಸಂದರ್ಭದಲ್ಲಿ ಅರ್ಚಕ ರಾಮಚಂದ್ರ ಅಡಿಗ, ನಾಟಿ ವೈದ್ಯ ಬಾಲಚಂದ್ರ ಶೆಟ್ಟಿ ಪಲ್ಲಿಪಾಡಿ, ನಾಟಿ ವೈದ್ಯ ಶೀನ ಪೂಜಾರಿ ಕೊಳತ್ತಮಜಲು ಇವರನ್ನು ಸಮ್ಮಾನಿಸಲಾಯಿತು. ಜಿತೇಶ್ ಉಳಿಯ ಸ್ವಾಗತಿಸಿ ವಾದಿರಾಜ್ ಕಲ್ಲೂರಾಯ ಕಿನ್ನಿಕಂಬಳ ಕಾರ್ಯಕ್ರಮ ನಿರೂಪಿಸಿದರು.







