ಬಂಟ್ವಾಳ ಪುರಸಭೆ ಬಜೆಟ್ ನ ಜಮಾಖರ್ಚು ಗೊಂದಲ ಮತ್ತು ಪುರಸಭೆ ನಿರ್ಣಯಗಳ ವಿರುದ್ಧ ಹಲವು ಆಕ್ಷೇಪಗಳಿದ್ದರೂ ಕ್ರಮ ಕೈಗೊಳ್ಳದ ವಿಚಾರದ ಕುರಿತು ಯೋಜನಾಕಾರಿ ಉತ್ತರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ನಡೆಸಿದ ಧರಣಿಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸುಮಾರು 4.15ರ ವೇಳೆ ಯೋಜನಾಧಿಕಾರಿ ಪ್ರಸನ್ನ ಅವರು ಪುರಸಭೆಗೆ ಆಗಮಿಸಿ ಧರಣಿ ನಿರತ ಬಿಜೆಪಿ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಧರಣಿ ನಿರತ ಸದಸ್ಯರಾದ ಗೋವಿಂದ ಪ್ರಭು , ದೇವದಾಸ ಶೆಟ್ಟಿಯವರು ಆರೋಪಗಳ ಸುರಿಮಳೆಯನ್ನೇ ಹರಿಸಿದರು. ಒಂದು ಹಂತದಲ್ಲಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಕಮೀಷನರ್ರವರ ವಿರುದ್ದವೂ ಆಕ್ರೋಶ ವ್ಯಕ್ತ ಪಡಿಸಿದರು. ಎಲ್ಲವನ್ನು ತಾಳ್ಮೆಯಿಂದ ಆಲಿಸಿದ ಯೋಜನಾಧಿಕಾರಿ ಪ್ರಸನ್ನ

ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರು ಅದರೆ ತಮ್ಮ ಪಟ್ಟು ಸಡಿಲಿಸದ ಸದಸ್ಯರು ಮಫತ್ಲಾಲ್ ಲೇಅಟ್ನ ಬಿಲ್ , ಅನಧಿಕೃತವಾಗಿ ರೂ ಒಂದು ಕೋಟಿ ವೆಚ್ಚದಲ್ಲಿಲ್ಲಿ ನಿರ್ಮಿಸಿಲಾದ ರಸ್ತೆಯ ಬಿಲ್ನ್ನು ಕೂಡಾ ಪಾವತಿಯನ್ನು ತಡೆಹಿಡಿಯಬೇಕು . ಹಾಗಯೇ ಬಜೆಟ್ ಕುರಿತು ಖಾಸಗಿ ಲೆಕ್ಕಪರಿಶೋಧಕರಿಂದ ಮರುತನಿಖೆ ಆಗಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಬೆಳಗ್ಗಿನಿಂದ ಧರಣಿ ಕೈಗೊಂಡಿದ್ದರೂ ಸಾಮಾನ್ಯ ಸಭೆಯನ್ನು ಮುಂದುವರಿಸಿರುವುದು ಕಾನೂನು ಬಾಹಿರ ಈ ಸಭೆಯ ನಿರ್ಣಯವನ್ನು ಯಾವ ರೀತಿ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ಗೋವಿಂದ ಪ್ರಭು, ಇದು ಸದಸ್ಯರಿಗೆ ಮಾಡಿದ ಅಗೌರವ ಎಂದು ಹೇಳಿದರಲ್ಲದೆ ತನ್ನ 36 ವರ್ಷಗಳ ಸದಸ್ಯತನದ ಇತಿಹಾಸದಲ್ಲಿ ಈ ರೀತಿಯ ಅವ್ಯವಸ್ಥ ಕಂಡಿಲ್ಲ. ಎಲ್ಲವನ್ನು ಕಾನೂನು ಬಾಹಿರವಾಗಿಯೇ ನಡೆಯುತ್ತಿದೆ. ದೂರು ಕೊಟ್ಟರೂ ಮೇಲಾಧಿಕಾರಿಗಳಿಂದ ಕನಿಷ್ಟ ಸ್ಪಂದನೆ ಸಿಗುತ್ತಿಲ್ಲ, ಮುಖ್ಯಾಧಿಕಾರಿಯವರೊಂದಿಗೆ ಅವರ ಛೇಂಬರ್ನಲ್ಲಿಅಧ್ಯಕ್ಷರಿಂದಲೇ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು . ಕೈಕುಂಜೆ ರಸ್ತೆ ಸೇರಿದಂತೆ ಸುಮಾರು 30 ದೂರುಗಳನ್ನು ಸಲ್ಲಿಸಿದರೂ ಯಾವುದಕ್ಕೂ ನಮಗೆ ನ್ಯಾಯವೇ ಸಿಕ್ಕಿಲ್ಲ. ಹಾಗಾಗಿ ನಾವು ಧರಣಿ ನಡೆಸಬೇಕಾಗಿ ಬಂದಿದೆ ಎಂದು ಯೋಜನಾನಿರ್ದೇಶಕರ ಗಮನ ಸೆಳೆದರು. ಕೊನೆಗೆ ಲೋಕಾಯುಕ್ತದಲ್ಲಿರುವ ಪ್ರಕರಣದ ಕುರಿತು ತಾವು ಈಗ ಏನು ಮಾಡುವಂತಿಲ್ಲ ಉಳಿದಂತೆ ಕಟ್ಟಡ ತೆರಿಗೆ , ಬಾಡಿಗೆಯನ್ನು ಜೂನ್ 30ರೊಳಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಮಫತ್ಲಾಲ್ ಲೇಅಟ್ ಕುರಿತು ಮೂಡದ ಯೋಜನಾ ನಿರ್ದೇಶಕರ ವಿರುದ್ದ ಕ್ರಮಕ್ಕೆ ಮೇಲಾಧಿಕಾರಿಗೆ ಪತ್ರ ಬರೆಯಲಾಗುವದು. ಬಜೆಟ್ ವ್ಯತ್ಯಾಸದ ಬಗ್ಗೆ ಸ್ಪಷ್ಟನ್ ನೀಡುವಂತೆ ಸೂಚಿಸಿ ನಿರ್ಗಮಿಸಿದರೂ ಸದಸ್ಯರು ಧರಣಿ ಮುಂದುವರಿಸಿದರು. ಮಫತ್ಲಾಲ್ ಲೇಅಟ್ನ ಬಿಲ್ ಹಾಗೂ ಅಗ್ರಹಾರ್ನಲ್ಲಿ ಅನಧಿಕೃತವಾಗಿ ರೂ ಒಂದು ಕೋಟಿ ವೆಚ್ಚದಲ್ಲಿಲ್ಲಿ ನಿರ್ಮಿಸಿಲಾದ ರಸ್ತೆಯ ಬಿಲ್ ಪಾವತಿಯನ್ನು ತಡೆಹಿಡಿಯಬೇಕೆಂಬ ಸದಸ್ಯರ ಬೇಡಿಕೆಗೆ ಶುಕ್ರವಾರ ಬೆಳಿಗ್ಗೆ ಲಿಖಿತವಾಗಿ ಪತ್ರ ನೀಡುವ ಮುಖ್ಯಾಧಿಕಾರಿ ಸುಧಾಕರ ಅವರ ಭರವಸೆಯ ಮೇರೆಗೆ ಧರಣಿಯನ್ನು ಕೈಬಿಟ್ಟರು. ಸದಸ್ಯರಾದ ಜಗದೀಶ್, ಗಂಗಾದರ, ಇಂಜಿನಿಯರ್ ಡೊಮೊನಿಕ್ ಡಿಮೆಲ್ಲೋ ಉಪಸ್ಥಿತರಿದ್ದರು. ಒಂದು ಹಂತದಲ್ಲಿ ಮುಖ್ಯಾಧಿಖಾರಿ ಸುಧಾಕರ ಮತ್ತು ಇಂಜಿನಿಯರ್ ಡೊಮೊನಿಕ್ ಡಿಮೆಲ್ಲೋ ಅವರನ್ನು ತರಾಟೆಗೆ ತೆಗೆದುಕೊಂಡರೆ ಕೊನೆಗೆ ಕೆಲವೊಂದು ವಿಚಾರದಲ್ಲಿ ತಮ್ಮ ಅಸಾಯಕತೆಯನ್ನು ಸದಸ್ಯರಲ್ಲಿ ವ್ಯಕ್ತಪಡಿಸಿದರು.
