ಬಂಟ್ವಾಳ: ಕಳೆದ 38 ವರ್ಷಗಳಿಂದ ರಾಜ್ಯದೆಲ್ಲೆಡೆ ಸಾವಿರಾರು ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಕಲ್ಲಡ್ಕದ ಶ್ಯಾಂ ಜಾದೂಗಾರ್ ಅವರ ಮಾಯಾಲೋಕ ಸಂಸ್ಥೆಯ ಕ್ಷೇಮಾಭಿವೃದ್ಧಿ ಪ್ರಯುಕ್ತ ಜಾದೂ ಪ್ರದರ್ಶನ ಹಾಗೂ ಸಮ್ಮಾನ ಕಾರ್ಯಕ್ರಮ ವಗ್ಗ ಪಚ್ಚಾಜೆ ಸಭಾಂಗಣದಲ್ಲಿ ಬುಧವಾರ ಜರಗಿತು.
ಮಂಗಳೂರು ಸಂತ ಆಲೋಶಿಯಸ್ ಪ್ರೌಢಶಾಲೆ ನಿವೃತ್ತ ಅಧ್ಯಾಪಕ,ಕವಿ,ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಕೆಲವೇ ಕೆಲವು ಜನರಿಗೆ ಸಿದ್ಧಿಸಿರುವ ಕಲೆಯಿಂದ ಇತರರಿಗೆ ಅಪಾರವಾದ ಆನಂದ ದೊರಕುತ್ತದೆ. ಇಂತಹ ಕಲೆ ಮತ್ತು ಕಲೆಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಜಾದೂ ಕಾರ್ಯಕ್ರಮದ ಮೂಲಕ ಜನರಿಗೆ ಮನರಂಜನೆ ನೀಡುತ್ತಾ ಬಂದಿರುವ ಶ್ಯಾಮ್ ಜಾದೂಗಾರ್ ಅವರ ಸಾಮಾಜಿಕ ಕಳಕಳಿ ಪ್ರಶಂಸನೀಯ ಎಂದು ಹೇಳಿದರು. ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಎಸ್. ಕೊಟ್ಟಾರಿ ಅವರು ಮಾತನಾಡಿ,ಭಾರತೀಯ ಕಲೆ ನಮ್ಮ ಸಂಸ್ಕøತಿಗೆ ಪೂರಕವಾಗಿದ್ದು ವಿಶ್ವದಲ್ಲೇ ಪ್ರಾಧನ್ಯತೆ ಪಡೆದಿದೆ. ಇಂತಹ ಕಲೆಗೆ ಪ್ರೋತ್ಸಾಹ ನೀಡುವುದರಿಂದ ಭಾರತ ಸಂಸ್ಕøತಿಯ ಉದ್ದೀಪನವಾಗುತ್ತದೆ ಎಂದರು. ಬಂಟ್ವಾಳ ತಾ. ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ,ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಅವರು ಮಾತನಾಡಿ ಕಲೆಯ ಬಗ್ಗೆ ಒಲವಿಲ್ಲದವರ ಜೀವನ ವ್ಯರ್ಥ. ನಿತ್ಯ ಜೀವನದಲ್ಲಿ ಆನಂದ ಪಡೆಯಲು ಮತ್ತು ಆಧ್ಯಾತ್ಮಿಕತೆಯ ತಾದಾತ್ಮತೆ ಪಡೆಯಲು ಕಲೆಯ ಮೇಲೆ ಆಸಕ್ತಿ ಅಗತ್ಯ ಎಂದು ಹೇಳಿದರು.

002

ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಉದ್ಯಮಿ ಟಿ. ಹರೀಂದ್ರ ಪೈ,ಬಿಜೆಪಿ ಒ.ಬಿ.ಸಿ.ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣಪ್ಪ ಪೂಜಾರಿ, ವಿಜಯ ಬ್ಯಾಂಕ್ ಮುಖ್ಯ ಪ್ರಬಂಧಕ ಬೇಬಿ ಕುಂದರ್, ಕಾವಳಪಡೂರು ಗ್ರಾ.ಪಂ.ಸದಸ್ಯರಾದ ಯೂಸುಫ್ ಬಾಂಬಿಲ,ಚಂದ್ರಶೇಖರ ಕರ್ಣ,ಸುರೇಶ ಸಪಲ್ಯ,ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ನೀರ್ಕಣ ಅಧ್ಯಕ್ಷ ಬೆನೆಡಿಕ್ಟ್ ಡಿಸೋಜ ವೇದಿಕೆಯಲ್ಲಿದ್ದರು.
ಮಾಯಲೋಕ ಸಂಸ್ಥೆಯ ಸುಜೀತ್ ಕಲ್ಲಡ್ಕ,ಗಣೇಶ್ ಸುಳ್ಯ,ನಾರಾಯಣ ಆಚಾರ್,ಬಿ.ಆರ್.ಕಬಕ,ಪ್ರಕಾಶ್ ಬಂಟ್ವಾಳ,ಶ್ರೇಯಸ್ ಕಲ್ಲಡ್ಕ,ಗೋಪಾಲ್ ಕೆ.,ಕು. ಕಾವ್ಯ,ಕು.ಅಶ್ವಿತಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕವಿ,ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಅವರನ್ನು ಸಮ್ಮಾನಿಸಲಾಯಿತು.
ಮುರಳೀಕೃಷ್ಣ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಂಚಾಲಕ ಶ್ಯಾಮ್ ಜಾದೂಗಾರ್ ಪ್ರಸ್ತಾವಿಸಿದರು. ಬಳಿಕ ಜಾದೂ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು. —

By suddi9

Leave a Reply

Your email address will not be published. Required fields are marked *