ಪವಿತ್ರವಾದ ಕುಟುಂಬ ವ್ಯವಸ್ಥೆಯನ್ನು ಜಗತ್ತಿಗೆ ತೋರಿಸಿಕೊಟ್ಟ ದೇಶ ಭಾರತ, ಭಾರತಕ್ಕೆ ಅದೆಷ್ಟೋ ಬಾರಿ ವಿದೇಶಿಗರ ದಾಳಿಗಳಾಗಿ ಸಂಪತ್ತು ನಷ್ಟವಾಗಿರಬಹುದು.ಆದರೆ ಸಂಸ್ಕøತಿ ಇನ್ನೂ ಜೀವಂತವಾಗಿದೆ.ಎಂದು ದ.ಕ.ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುದರ್ಶನ್ ಮೂಡಬಿದ್ರೆಯವರು ಸುಜೀರು ಶ್ರೀ ದುರ್ಗಾ ಚಾಮುಂಡಿ ದೇವಸ್ಥಾನದ 25ನೇ ವರ್ಷದ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸುಜೀರು ಐತಪ್ಪ ಆಳ್ವರವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಅಡ್ಯಾರ್ ಆನಂದ ಶೆಟ್ಟಿ ,ಅರುಣ್ ಕುಮಾರ್ ನುಳಿಯಾಲು ಗುತ್ತು,ಚಂದ್ರಶೇಖರ್ ಗಾಂಭೀರ, ಅಶೋಕ್ ತುಂಬೆ,ಮುಂಡಯಾನೆ ಮೋನಪ್ಪ ಪೂಜಾರಿ ,ಮತ್ತಿತರರು ಉಪಸ್ಥಿತರಿದ್ದರು.ಉತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಪ್ರತಾಪ್ ಆಳ್ವ ಸುಜೀರು ಗುತ್ತು ಸ್ವಾಗತಿಸಿದರು.ಕ್ಷೇತ್ರದ ದರ್ಶನ ಪಾತ್ರಿ ಜನಾರ್ಧನ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರವೀಣ್ ಶೆಟ್ಟಿ ಸುಜೀರು ಧನ್ಯವಾದ ಸಮರ್ಪಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ಜನ ಗಣ್ಯರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
