ಬಂಟ್ವಾಳ: ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷ ಜಲೀಲ್ ಸಾವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ಕರೋಪಾಡಿ ಗ್ರಾಮಕ್ಕೆ ದೊಡ್ಡ ನಷ್ಟ. ಅವರು ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ, ಪ್ರಾಮಾಣಿಕ, ಪಕ್ಷದ ಯಾವುದೇ ತರಬೇತಿ ರಾಜ್ಯ ಮತ್ತು ಹೊರರಾಜ್ಯದಲ್ಲಿ ಇದ್ದಾಗಲೂ ಅವರ ಉಪಸ್ಥಿತಿ ಇರುತ್ತಿತ್ತು. ಯಾರಾದರೂ ಅವರ ಮೇಲೆ ಅಸಮಾದಾನ ವ್ಯಕ್ತ ಮಾಡಿದರೂ ದುಡುಕಿ ಮಾತಾನಾಡಿದವರಲ್ಲ. ಕಾನೂನಿನಲ್ಲಿ ಆಗದ ಯಾವುದೇ ಕೆಲಸಗಳ ಬಗ್ಗೆ ಜಲೀಲ್ ಒತ್ತಾಯ ಮಾಡಿದವರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
