IMG-20140722-WA0002ಯುವಕ ಸುದ್ದಿ9ಕೈಕಂಬ: ಬೈಕ್ ಮತ್ತು ಬಸ್ ಮಧ್ಯೆ ಉಂಟಾದ ಭೀಕರ ಅಪಘಾತಕ್ಕೆ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಗಂಜಿಮಠ ಐಟಿಪಾಕರ್್ ತಿರುವು ರಸ್ತೆಯ ಗ್ಯಾರೇಜ್ ಸಮೀಪ ನಡೆದಿದೆ. ಮೃತ ದುದರ್ೈವಿಯನ್ನು ಮೂಡುಪೆರಾರ ನಿವಾಸಿ ಕೃಷ್ಣಪ್ಪ ಎಂಬವರ ಸಾಕುಪುತ್ರ ರಾಜಾ ಯಾನೆ ವಿಕ್ರಮ್(26) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮೂಡಬಿದ್ರೆ ಕಡೆಯಿಂದ ಬರುತ್ತಿದ್ದ ಪದ್ಮಾಂಬಿಕ ಎಂಬ ಬಸ್ಗೆ ಸೈಡ್ ಕೊಡಲು ಹೋದ ರಾಜು ಅವರ ಬೈಕ್ ರಸ್ತೆ ಮಧ್ಯೆ ಇರುವ ಗುಂಡಿಗೆ ಸಿಲುಕಿ ನಿಯಂತ್ರಣ ತಪ್ಪಿ ಬಸ್ನ ಚಕ್ರದಡಿಗೆ ಸಿಲುಕಿತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರಾಜು ಅವರ ತಲೆ ಸಂಪೂರ್ಣವಾಗಿ ಗುರುತಿಸಲಾಗದಷ್ಟು ಜಜ್ಜಿ ಹೋಗಿತ್ತು.

12
ರಾಜು ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಕೈಕಂಬದ ತನ್ನ ಸ್ನೇಹಿತನೋರ್ವನಿಂದ ಬೈಕ್ ಪಡೆದಿದ್ದ ರಾಜು ಎಡಪದವಿನತ್ತ ಸಂಚರಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮೃತರ ತಲೆ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು ಸ್ಳಳದಲ್ಲಿ ರಕ್ತ ಕೋಡಿಯಾಗಿ ಹರಿದಿತ್ತು. ತಲೆಯ ಮೆದುಳು ರಸ್ತೆಯಲ್ಲಿ ಚೆಲ್ಲಾಪಲ್ಲಿಯಾಗಿ ಬಿದ್ದಿದ್ದು, ಅದನ್ನು ಹಿಡಿಸೂಡಿ ಮೂಲಕ ಗುಡಿಸಿ ಒಟ್ಟು ಸೇರಿಸಿದ್ದು ಘಟನೆಯ ಭೀಕರತೆಗೆ ಸಾಗಿಸಲಾಗಿದೆ. ಛಿದ್ರಗೊಂಡಿದ್ದ ಮೃತದೇಹವನ್ನು ಟಪರ್ಾಲಿನ ಮೂಲಕ ಹಾಕಿ ಬಳಿಕ ಗಂಜಿಮಠ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದ್ದು ಶವಮಹಜರು ನಡೆಸಲಾಗಿದೆ.
ಇಲ್ಲಿರುವ ಮರಣಗುಂಡಿಗೆ ಹಲವಾರು ಬೈಕ್ಗಳು ಸ್ಕಿಡ್ ಆಗುತ್ತಿದ್ದು ಕೂದಲೆಳೆಯ ಅಂತರದಲ್ಲಿ ಪಾರಾದವರಿದ್ದಾರೆ. ಆದರೂ ಗುಂಡಿಯನ್ನು ಮುಚ್ಚಲು ಹೋಗದ ಆಡಳಿತ ಮಂಡಳಿಯ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

1

2

3

4

5

6

7

8

9

 

By suddi9

Leave a Reply

Your email address will not be published. Required fields are marked *