ಬಿ.ಸಿ.ರೋಡು : 1990ರಲ್ಲಿ ಅಂಬೇಡ್ಕರ್ರವರ ಜನ್ಮಶತಾಬ್ದಿ ಆಚರಣೆ ಮಾಡಿದ ಪ್ರಕಾರ ಇಂದು ಅವರ 127ನೇ ಜನ್ಮ ದಿನಾಚರಣೆಯನ್ನಾಗಿ ಆಚರಿಸಬೇಕು. ಸರ್ಕಾರ ಮತ್ತು ಅಧಿಕಾರಿವರ್ಗದವರ ಲೆಕ್ಕ ತಪ್ಪಿ 126 ಜನ್ಮದಿನಾಚರಣೆ ಎಂದು ಗಣನೆಗೆ ತಂದು ಆಚರಿಸುತ್ತಿದೆ. ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಆಚರಿಸುವಾಗ ಬಹಳ ಎಚ್ಚರಿಕೆಯಿಂದ ಗೌರವದಿಂದ ಆಚರಿಸಬೇಕು ಎಂದು ಡಿ.ಕೆ.ಡಿಸ್ಟ್ರಿಕ್ಟ್ ಅಂಬೇಡ್ಕರ್ ಫೋರಂ ಫಾರ್ ಸೋಶಿಯಲ್ ಜಸ್ಟೀಸ್ನ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ತಿಳಿಸಿದರು.

ಅವರು ಶುಕ್ರವಾರ ಬಂಟ್ವಾಳ ಎಸ್.ಜೆ.ಎಸ್.ವೈ. ಸಭಾಂಗಣ ತಾಲೂಕು ಪಂಚಾಯತ್ನಲ್ಲಿ ನಡೆದ ತಾಲೂಕು ಆಡಳಿತ, ತಾಲೂಕು ಪಂಚಾಯತು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ರವರ 126ನೇ ಜನ್ಮದಿನಾಚರಣೆಯ ಸಂದರ್ಭ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಅವರು ವಿಶ್ವ ಸಂಸ್ಥೆಯು ಈ ಅಂಬೇಡ್ಕರ್ರವರ ಜನ್ಮದಿನವನ್ನು ವಿಶ್ವ ತಿಳುವಳಿಕೆ ದಿನವನ್ನಾಗಿ ಆಚರಿಸುತ್ತದೆ. ಇದು ನಮ್ಮ ದೇಶಕ್ಕೆ ಹೆಮ್ಮೆ ಎಣಿಸುತ್ತದೆ. ಅಂಬೇಡ್ಕರ್ರವರು ಹಿಂದೂ ವಿರೋಧಿಯಲ್ಲ. ಹಿಂದೂ ಧರ್ಮದ ಕೆಲವು ಅವ್ಯವಸ್ಥೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹಿಂದಿನ ಕಾಲದಿಂದ ಆಚರಿಸಿಕೊಂಡು ಬರುತ್ತಿದ್ದ ಸತಿಸಹಗಮನ ಪದ್ಧತಿಯನ್ನು ಅಂಬೇಡ್ಕರ್ರವರು ವಿರೋಧಿಸಿ ಮಹಿಳೆಯರನ್ನು ಜೀತದಿಂದ ವಿಮುಕ್ತಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಮಹಿಳೆಯರು ದೇವರ ಕಾಲಿಗೆ ಹೂ ಇಡುವ ಬದಲು ಅಂಬೇಡ್ಕರ್ರ ಪಾದಕ್ಕೆ ನಮಸ್ಕರಿಸಬೇಕು ಎಂದು ತಿಳಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ನ ಅಧ್ಯಕ್ಷ ಚಂದ್ರಹಾಸ ಕರ್ಕೇರವರು ಅಂಬೇಡ್ಕರ್ರವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಅಧ್ಯಕ್ಷತೆಯ ವಹಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳಿಗೆ ಎಲ್ಲಾ ಅಧಿಕಾರಿವರ್ಗದವರು ಖಡ್ಡಾಯವಾಗಿ ಭಾಗವಹಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಗೇರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹೆಚ್ ಖಾದರ್, ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ತಾ. ಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ತಾ.ಪಂ. ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಧನಲಕ್ಷ್ಮೀ ಸಿ. ಬಂಗೇರ, ಬಂಟ್ವಾಳ ಪುರಸಭೆಯ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯ ಅಧಿಕಾರಿ ಸುಧಾಕರ್, ಬಂಟ್ವಾಳ ತಾ.ಪಂ ಕಾರ್ಯನಿರ್ವಹಕಾಧಿಕಾರಿ ಸಿಪ್ರಿಯನ್ ಮಿರಾಂದ ಉಪಸ್ಥಿತರಿದ್ದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ತಾ.ಪಂ. ಕಚೇರಿ ಸಿಬ್ಬಂದಿ ಚಂದ್ರಾವತಿ ಮತ್ತು ಪ್ರೆಸಿಲ್ಲಾರವರು ನಾಡಗೀತೆ ಹಾಡಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರ್ವಹಿಸಿದರು.
ಕಳೆದ 2015-16ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಯೋಗೀಶ್, ಮನೀಷಾ, ನಿಶ್ಮಿತಾರಿಗೆ ಲ್ಯಾಪ್ಟ್ಯಾಪ್ ಸಮಾರಂಭದಲ್ಲಿ ವಿತರಿಸಲಾಯಿತು.
