ಉಡುಪಿ: ಭಾರತೀಯ ಸಾಂಸ್ಕ್ರತಿಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ನೀಡಲಾಗುವ ಭಾರತ ಭೂಷಣ ಪ್ರಶಸ್ತಿಗೆ ಯುವ ಸಾಮಾಜಿಕ ಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ರವರು ಆಯ್ಕೆಯಾಗಿದ್ದಾರೆ. ಎಂದು ಪ್ರಕಟನೆ ತಿಳಿಸಿದೆ.

ಸಮಾಜ ಸೇವೆ ವಿಭಾಗದಲ್ಲಿ ಈ ಪ್ರಶಸ್ತಿ ಯನ್ನು ನೀಡಲಾಗುತ್ತಿದೆ.ವಿವಿಧ ರೀತಿಯ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಅದೇ ರೀತಿ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಂಘಟಿಸಿದ್ದಾರೆ.ತರಬೇತುದಾರರಾಗಿ ಸುಮಾರು 500 ಕ್ಕೂ ಮಿಕ್ಕಿದ ತರಬೇತಿಯನ್ನು ನಾಡಿನಾದ್ಯಂತ ನೀಡಿರುತ್ತಾರೆ.
