ಸುದ್ದಿ9ಮಂಗಳೂರು:ಕಾಣಿಯೂರಿನಲ್ಲಿ ಮಂಜೂರಾದ ಸರಕಾರಿ ಪ್ರಥಮದಜರ್ೆ ಕಾಲೇಜನ್ನು ಕಾಣಿಯೂರಿನ ಖಾಸಗಿ ಕಟ್ಟಡದಿಂದ ಬೆಳಂದೂರಿಗೆ ವಗರ್ಾವಣೆ ಮಾಡಲು ಹಠಮಾರಿ ನಿಲುವಿನಿಂದ, ವಿದ್ಯಾಥರ್ಿಗಳ ಹಿತವನ್ನು ಕಡೆಗಣಿಸಿ ಕಾಂಗ್ರೆಸ್ ನಾಯಕರು ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ಮತ್ತು ಒಣ ಪ್ರತಿಷ್ಠೆಗಾಗಿ ವಿದ್ಯಾಥರ್ಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಪ್ರಭು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾಥರ್ಿಗಳಿಗೆ ಮತ್ತು ನಾಗರಿಕರಿಗೆ ಅನುಕೂಲ ವಾತಾವರಣ ಹೊಂದಿರುವ ಕಾಣಿಯೂರಿನಲ್ಲಿ ಕಾಲೇಜು ಪ್ರಾರಂಭಿಸಿದ್ದ ಬಗ್ಗೆ ಎಲ್ಲರೂ ಒಲವು ವ್ಯಕ್ತಪಡಿಸಿದ್ದರು. ಆದರೆ ಕೆಲವೇ ಕಾಂಗ್ರೆಸ್ ನಾಯಕರು ವೈಯಕ್ತಿಕ ಕಾರ್ಯ ಸಾಧನೆ ಮತ್ತು ಒಣ ಪ್ರತಿಷ್ಠೆಯನ್ನು ಮುಂದಿರಿಸಿ, ಕಾಲೇಜನ್ನು ಬೆಳಂದೂರಿಗೆ ವಗರ್ಾಯಿಸಲು ಸರಕಾರದ ಮೇಲೆ ಒತ್ತಡ ತಂದು, ಯಶಸ್ವಿಯಾಗಿದ್ದಾರೆ. ಯಾವುದೇ ಮೂಲಭೂತ ಸೌಕರ್ಯ ಮತ್ತು ವಿದ್ಯಾಥರ್ಿಗಳಿಗೆ ಅನುಕೂಲ ವಾತಾವರಣ ಇಲ್ಲದಿರುವ ಬೆಳಂದೂರಿಗೆ ಕಾಲೇಜು ವಗರ್ಾಯಿಸಿದ ಕಾಂಗ್ರೆಸ್ನ ಕೆಲವೇ ಸ್ಥಳೀಯ ನಾಯಕರ ಒತ್ತಡದ ಹಿಂದಿರುವ ಉದ್ದೇಶವೇನಿತ್ತು? ವಿದ್ಯಾಥರ್ಿಗಳ ಹಿತಕ್ಕಿಂತಲೂ ಮಹತ್ತರವಾದ ಅದಾವ ಕಾರ್ಯ ಸಾಧನೆ ಮತ್ತು ಅನಿವಾರ್ಯತೆ ಕಾಂಗ್ರೆಸ್ ನಾಯಕರಿಗಿತ್ತು ಎಂದು ಸತೀಶ್ ಪ್ರಭು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರ ಹಠಮಾರಿ ವರ್ತನೆಯಿಂದ ಬೇಸತ್ತಿರುವ ಬಹುತೇಕ ವಿದ್ಯಾಥರ್ಿಗಳು ಕಾಣಿಯೂರು ಕಾಲೇಜಿನಿಂದ ವಗರ್ಾವಣೆ ಪತ್ರ ಪಡೆದು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಬೆರಳೆಣಿಕೆಯ ಕೆಲವೇ ವಿದ್ಯಾಥರ್ಿಗಳು ಅನಿವಾರ್ಯವಾಗಿ ಬೆಳಂದೂರಿನ ಕಾಲೇಜಿಗೆ ಹೋಗುತ್ತಿದ್ದು, ಕಾಂಗ್ರೆಸ್ ನಾಯಕರ ಒಣ ಪ್ರತಿಷ್ಠೆ ವಿದ್ಯಾಥರ್ಿಗಳ ಭವಿಷ್ಯಕ್ಕೆ ಸಂಚಕಾರವೆನಿಸಿದೆ. ಇನ್ನಾದರೂ ಕಾಂಗ್ರೆಸ್ ನಾಯಕರು ಕೇವಲ ತಮ್ಮ ಪಕ್ಷದ ಸರಕಾರ ರಾಜ್ಯದಲ್ಲಿ ಆಡಳಿತೆಯಲ್ಲಿದೆ ಎಂಬ ಏಕೈಕ ಕಾರಣದಿಂದ ವಿದ್ಯಾಥರ್ಿಗಳ ಹಿತವನ್ನು ನಿರ್ಲಕ್ಷಿಸಿ, ಯಾವುದೇ ಸವಲತ್ತು ಇಲ್ಲದಿರುವ ಬೆಳಂದೂರಿಗೆ ಪ್ರಥಮ ದಜರ್ೆ ಕಾಲೇಜನ್ನು ವಗರ್ಾಯಿಸಿರುವುದು ಸರಿಯಲ್ಲ. ಕನಿಷ್ಠ ಶಿಕ್ಷಣದಂತಹ ಕ್ಷೇತ್ರದಲ್ಲಿ ರಾಜಕೀಯ ಬೆರೆಸುವುದನ್ನು ಕಾಂಗ್ರೆಸ್ ನಿಲ್ಲಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
