ಸುದ್ದಿ9ಮಂಗಳೂರು ಮಹಾನಗರಪಾಲಿಕೆಯಲ್ಲಿ ಅಸಮರ್ಪಕ ಕಾರ್ಯ ನಿರ್ವಹಣೆಯನ್ನು ಸರಿಪಡಿಸುವ ಬದಲಾಗಿ ಸಮರ್ಥ, ದಕ್ಷ ಅಧಿಕಾರಿಗಳ ವಗರ್ಾವಣೆ ರಾಜಕೀಯದಲ್ಲಿ ಕಾಂಗ್ರೆಸ್ ನಾಯಕರು, ಶಾಸಕರು ನಿರತರಾಗಿದ್ದು, ನಗರದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ ಪ್ರಭು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಲೇರಿಯಾ, ಡೆಂಗ್ಯು ಪ್ರಕರಣಗಳು ಹೆಚ್ಚು ಹೆಚ್ಚಾಗಿ ದಾಖಲಾಗುತ್ತಿದ್ದರೂ, ನಗರದ ಸ್ವಚ್ಛತೆ ಮತ್ತು ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಮಹಾನಗರಪಾಲಿಕೆ ಉತ್ಸುಕವಾಗಿಲ್ಲ. ಘನತ್ಯಾಜ್ಯ ನಿರ್ವಹಣೆ ಸಂಪೂರ್ಣ ವಿಫಲವಾಗಿದ್ದು, ಅಲ್ಲಲ್ಲಿ ಕೊಳೆತು ನಾರುತ್ತಿರುವ ಘನತ್ಯಾಜ್ಯಗಳು ಜನತೆಯಲ್ಲಿ ರೋಗಭೀತಿಯನ್ನು ಮೂಡಿಸಿದೆ. ರಸ್ತೆ ಹೊಂಡ ಮುಚ್ಚಿ ದುರಸ್ತಿಪಡಿಸುವಿಕೆ, ಮಳೆನೀರಿನ ಚರಂಡಿಯ ಹೂಳೆತ್ತುವ ಕಾಮಗಾರಿಯ ಬಗ್ಗೆ ನಗರಾಡಳಿತೆ ಗಮನ ನೀಡುತ್ತಿಲ್ಲ. ಪರಿಣಾಮವಾಗಿ ನಾಗರಿಕರು ನಡೆದಾಡಲು, ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು ಕೃತಕ ನೆರೆಭೀತಿ ಸೃಷ್ಟಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಮಹಾನಗರಪಾಲಿಕೆಯ ಚುನಾವಣೆಯ ಸಂದರ್ಭದಲ್ಲಿ ಸ್ವಯಂಘೋಷಿತ ಆಸ್ತಿತೆರಿಗೆಯನ್ನು ಯಾವುದೇ ಕಾರಣಕ್ಕೂ ಏರಿಕೆ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿ, ಅಧಿಕಾರಕ್ಕೆ ಬಂದ ಅನಂತರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಒಪ್ಪಿಗೆಯೊಂದಿಗೆ ತೆರಿಗೆ ಏರಿಕೆಯನ್ನು ಮಾಡಿ, ಅನಂತರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಮಾಯಕತೆ ಪ್ರದಶರ್ಿಸಿ, ಚುನಾವಣೆ ನಂತರ ಆಸ್ತಿತೆರಿಗೆ ಹೆಚ್ಚಳ ವಾಪಾಸು ಪಡೆಯುವಂತೆ ಜನತೆಗೆ ಭರವಸೆ ನೀಡಿತ್ತು. ಆದರೆ ಇದೀಗ ಹಲವಾರು ತಿಂಗಳುಗಳೇ ಕಳೆದರೂ ಕಾಂಗ್ರೆಸ್, ಯಾವತ್ತೂ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಬಣಗಳ ಒಳರಾಜಕೀಯಗಳಲ್ಲಿ ಉತ್ಸುಕರಾಗಿದ್ದು ಪಾಲಿಕೆಯ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನಗರದಲ್ಲಿ ಅಭಿವೃದ್ಧಿ ಕಾಮಗಾರಿ, ಅನುದಾನಗಳ ಬಳಕೆ, ಜನತೆಗೆ ಮೂಲಭೂತ ಸೌಕರ್ಯಗಳ ಒದಗನೆ ಮುಂತಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ ಪ್ರಭು ಆಗ್ರಹಿಸಿದ್ದಾರೆ.
