ಮೂಡುಬಿದಿರೆ: ಪತಂಜಲಿ ಯೋಗಪೀಠ ಹರಿದ್ವಾರ ಹಾಗೂ ಪತಂಜಲಿ ಯೋಗ ಸಮಿತಿ ಮೂಡುಬಿದಿರೆ ಇದರ ಜಂಟಿ ಆಶ್ರಯದಲ್ಲಿ ಯೋಗ ಸಹ ಶಿಕ್ಷಕ ತರಬೇತಿ ಶಿಬಿರವು ಮೂಡುಬಿದಿರೆ ಬಿಲ್ಲವ ಸಂಘದ ಕಾಮಧೇನು ಸಭಾಭವನದಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ., ಯೋಗ ಬದುಕಿನ ಕಲೆ. ಯೋಗ ಆತ್ಮವನ್ನು ಪರಮಾತ್ಮನೊಂದಿಗೆ, ಜಡವಾಗಿರುವ ಮನಸ್ಸನ್ನು ಸೂಕ್ಷ್ಮ, ಚಂಚಲವಾಗಿರುವ ಮನಸ್ಸಿನೊಂದಿಗೆ ಜೋಡಣೆ ಮಾಡುವಂತದ್ದು. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಯೋಗದ ಯೋಜನೆಗಳಿಗೆ ಬಾಬಾ ರಾಮ್‍ದೇವ್ ಪ್ರೇರಕ ಶಕ್ತಿ ಎಂದು ಅಭಿಪ್ರಾಯಪಟ್ಟರು.

ಮೂಡುಬಿದಿರೆ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಡಾ.ರವಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಳೆದ 10 ವರ್ಷದಿಂದ ಯೋಗ ತರಬೇತಿಗೆ ಸ್ಥಳಾವಕಾಶ ನೀಡುತ್ತಿರುವ ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್ ಅವರನ್ನು ಗೌರವಿಸಲಾಯಿತು. ಯೋಗ ಪರೀಕ್ಷೆಯಲ್ಲಿ ತೇರ್ಗಡೆಗೊಂಡವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಪ್ರದೀಪ್, ರಾಜ್ಯ ಉಪಾಧ್ಯಕ್ಷ ಜ್ಞಾನೇಶ್ ನಾಯಕ್, ಜಿಲ್ಲಾ ಪ್ರಭಾರಿ ರಾಘವೇಂದ್ರ ರಾವ್, ಯೋಗ ಶಿಕ್ಷಕ ಮಾಧವ, ಮೂಡುಬಿದಿರೆ ಪತಂಜಲಿ ಯೋಗ ಸಮಿತಿಯ ಸಂಚಾಲಕ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಯತಿರಾಜ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಭಿರಾರ್ಥಿಗಳಾದ ರಶ್ಮಿತಾ ಯುವರಾಜ್ ಜೈನ್ ಹಾಗೂ ಪ್ರೊ.ರವೀಶ್ ಕುಮಾರ್ ಅನಿಸಿಕೆ ಹಂಚಿಕೊಂಡಿದ್ದರು.
