ವಿಟ್ಲ:ಸೇವೆಗೆ ಹೆಸರಾದ ಸ್ಕೌಟ್ಸ್ &ಗೈಡ್ಸ್ ನ ವಿದ್ಯಾರ್ಥಿಗಳು ಬಾಲ್ಯದಿಂದಲೇ ನೆಲ, ಜಲ, ಮತ್ತು ಸ್ವಚ್ಛತೆಯ ಬಗ್ಗೆ ಗಮನ ನೀಡಿ ಅದರ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಗುರುತರ ಜವಾಬ್ಧಾರಿಯನ್ನು ನಿರ್ವಹಿಸಬೇಕೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ದಂಬೆಕಾನ ಕಿವಿಮಾತು ಹೇಳಿದರು.
ಅವರು ವಿಟ್ಲದ ಮಾದರಿಶಾಲೆಯ ಶತಮಾನೋತ್ಸವ ಸಭಾಭವನದಲ್ಲಿ ಜರುಗಿದ ಭಾರತ್ ಸ್ಕೌಟ್ಸ್ & ಗೈಡ್ಸ್‍ನ ವಾರ್ಷಿಕ ರ್ಯಾಲಿ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿಟ್ಲ ಲಯನ್ಸ್ ಕ್ಲಬ್‍ನ ಅಧ್ಯಕ್ಷರು ಹಾಗೂಭಾರತ್ ಸ್ಕೌಟ್ಸ್ & ಗೈಡ್ಸ್‍ನ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರು ಆದ ಸುದರ್ಶನ್ ಪಡಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಸುಮಿತ್ರಾ ಬಿ., ಅನಂತಕೃಷ್ಣ ಹೆಬ್ಬಾರ್ ,ನಿವೃತ್ತ ಪ್ರಾಂಶುಪಾಲರು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಹಾಗೂ ಗೈಡ್ ಎ.ಡಿ.ಸಿ ಜೂಲಿಯಾನ ಮೇರಿಲೋಬೋ, ತುಂಬೆ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ನವೀನ್ ಕುಮಾರ್ ಕೆ.ಎಸ್ ವಹಿಸಿದ್ದರು. ಭಾರತ್ ಸ್ಕೌಟ್ಸ್ & ಗೈಡ್ಸ್‍ನ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ವಿಟ್ಲ ಮಾದರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ವಿಶ್ವನಾಥ ಬಿ ಸ್ವಾಗತಿಸಿದರು. ಕಬ್ಸ್ ಶಿಕ್ಷಕಿ ಎ.ಎಲ್.ಟಿ. ಜೆಸಿಂತ ಸೋಫಿಯಾ ಮಸ್ಕರೇನಸ್ ಧನ್ಯವಾದ ವಿತ್ತರು. ಮುರುವ ಮಾಣಿಲದ ಸಹಶಿಕ್ಷಕರಾದ ನರಸಿಂಹ ಭಟ್ ಕಾರ್ಯಕ್ರಮ ನಿರ್ವಹಿಸಿದರು. ತದನಂತರ ಸ್ಥಳೀಯ ಅಳಿಕೆ ಸಂಸ್ಥೆಯ ಸಹಶಿಕ್ಷಕರಾದ ನಾರಾಯಣ ನಾಯಕ್ , ವಿಟ್ಲ ಮಾದರಿ ಶಾಲೆಯ ದಯಾನಂದ ಎನ್, ಹಾಗೂ ಉಳಿದ ಎಲ್ಲಾ ಸ್ಕೌಟ್ಸ್,ಗೈಡ್ಸ್, ಶಿಕ್ಷಕ/ಕಿಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸಾಹಸ ಕ್ರೀಡೆಗಳ ಪರಿಚಯ ಮಾಡಿಸಿದರು. ಅನೇಕ ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳು ಕಾರ್ಯಕ್ರಮಕ್ಕೆ ಮೆರುಗುನೀಡಿತು.

