ಬಂಟ್ವಾಳ: ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಕಾಸರಗೋಡು, ಧರ್ಮಜಾಗರಣ ಪ್ರತಿಷ್ಠಾನ, ಮಂಚಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಕುಕ್ಕಾಜೆಬೈಲು ಇದರ ಸಹಭಾಗಿತ್ವದಲ್ಲಿ 5 ದಿನಗಳ ಯಕ್ಷೋತ್ಸವ ಮಂಚಿ ಕುಕ್ಕಾಜೆಯಲ್ಲಿ ನಡೆಯಿತು.BTW_APL5_6

ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ದೀಪೋಜ್ವಲನಗೈದು ಯಕ್ಷೋತ್ಸವಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ನಂದಾವರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಿದಾನಂದ ರಾವ್, ಗಣೇಶ್‍ರಾವ್ ಪತ್ತುಮುಡಿ, ಭಾಗವಹಿಸಿದ್ದರು. ಎಡನೀರು ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದ ಗೋಲಾಕೃಷ್ಣ ಭಟ್ ಗುಂಡಿಮಜಲು ಮತ್ತು ಹಾಸ್ಯ ಕಲಾವಿದ ಬಾಲಕೃಷ್ಣ ಮಣಿಯಾಣಿಯವರನ್ನು ಯಕ್ಷೋತ್ಸವ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಯಕ್ಷೋತ್ಸವ ಸಮಿತಿಯ ಸಂಚಾಲಕ ವಿಠಲಪ್ರಭು ಪತ್ತುಮುಡಿ, ಅಧ್ಯಕ್ಷ ಕೈಯ್ಯೂರು ನಾರಯಣ ಭಟ್, ಉಪಸ್ಥಿತರಿದ್ದರು.

ಸಂಚಾಲಕ ವಿಠಲಪ್ರಭು ಪತ್ತುಮುಡಿ ಸ್ವಾಗತಿಸಿ, ಶೇಖರ ಡಿ ವಂದಿಸಿದರು. ಉಪಾಧ್ಯಕ್ಷ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *