ಅಂತರ್ ಕಾಲೇಜು ಖೋ ಖೋ ಪಂದ್ಯಾಟಕ್ಕೆ ಚಾಲನೆ ನೀಡಿ ಸಾಯೀಶ್ ಚೌಟ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಮಟ್ಟದ(ಬೆಂಗಳೂರು ವಿಭಾಗ ಹೊರತುಪಡಿಸಿ) ಖೋ ಖೋ ಪಂದ್ಯಾಟಕ್ಕೆ ಮಿಜಾರು ಶೋಭಾವನದ ವಿರಾಸತ್ ಮೈದಾನದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ತೆಂಕಮಿಜಾರು ಪಿಡಿಒ ಸಾಯೀಶ್ ಚೌಟ ಖೋ ಖೋ ಪಂದ್ಯಾಟಕ್ಕೆ ಚಾಲನೆ ನೀಡಿ, ದೇಶಿಯ ಗ್ರಾಮೀಣ ಕ್ರೀಡೆಯಾದ ಖೋ ಖೋ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವಂತಾಗಿದೆ. ಪ್ರೋ ಕಬಡ್ಡಿ ಮಾದರಿಯಲ್ಲಿ ಖೋ ಖೋ ಪಂದ್ಯಾಟಕ್ಕೆ ಮನ್ನಣೆ ಸಿಗಬೇಕಾಗಿದೆ. ಕ್ರೀಡಾ ಪ್ರೇಮಿಗಳ ಪ್ರೋತ್ಸಾಹ, ಖೋ ಖೋ ಫೆಢರೇಶನ್‍ನ ಕಾರ್ಯವೈಖರಿ ಮೂಲಕ ಹೊಸ ಹೊಸ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಖೋ ಖೋ ಕ್ರೀಡೆಗೆ ದೇಹಕ್ಕೆ ಮಾತ್ರವಲ್ಲ ಬುದ್ಧಿಗೂ ವ್ಯಾಯಾಮ ನೀಡುವಂತಹ ಕ್ರೀಡೆ. ಖೋ ಖೋ ಕ್ರೀಡೆ ಆಡುವುದರ ಮೂಲಕ ಮ್ಯಾನೆಂಜ್‍ಮೆಂಟ್ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ವೃದ್ಧಿಸಬಹುದು ಎಂದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಹಆಡಳಿತಾಧಿಕಾರಿ ರಾಕೇಶ್ ಶೆಟ್ಟಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಿತಿನ್ ಉಪಸ್ಥಿತರಿದ್ದರು.
ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ವಂದಿಸಿದರು.
—
