ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಏ.5 ರಂದು ಬುಧವಾರ ಆರಂಭಗೊಂಡಿತು. ಶ್ರೀ ದೇವಳದಲ್ಲಿ ತಂತ್ರಿಗಳು ,ಅರ್ಚಕರು, ಆಡಳಿತ ಮಂಡಳಿಯ ಮೋಕ್ತೇಸರರು ಹಾಗೂ ದೇವಳದ ಪ್ರಮುಖರಾದ ಪರ್ದಕಂಡ ವಾಸುದೇವ ಭಟ್ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮುಂಜೆ ಉಳಿಪಾಡಿ ಗುತ್ತಿನ ಗಣ್ಯರಾದಿಗಳು ಬ್ರಹದಾಕಾರದ ಚೆಂಡನ್ನು ಕೊಂಬು ಕಹಳೆ ಬ್ಯಾಂಡ್ ವಾಲಗದೊಂದಿಗೆ ಪವಿತ್ರವಾದ ಚೆಂಡಿನ ಗದ್ದೆಗೆ ದೇವಳದಿಂದ ತರಲಾಯಿತು.

5 vp polali chendu

5 vp chendu 6

chendu 1

5-1

5-3

5 vp chendu

ಗದ್ದೆಯ ಸುಲ್ತಾನ್ ಕಟ್ಟೆಯ ಭಾಗದಲ್ಲಿ ಅಮ್ಮುಂಜೆ ಗುತ್ತು ಹಾಗೂ ಉಳಿಪಾಡಿ ಗುತ್ತಿನವರು ನಿಂತಿರುತ್ತಾರೆ ಅವರು ವಾಲಗದೊಂದಿಗೆ ಸ್ವಾಗತಿಸಿ ಗದ್ದೆಯ ಮಧ್ಯ ಭಾಗಕ್ಕೆಕರೆದು ಕೊಂಡು ಬಂದು ಆಗ ಮಳಲಿ ಮಟ್ಟಿಯವರಾದ ಗಂಗಾಧರ ಜೋಗಿ ಅವರು *ಅಮ್ಮುಂಜೆ ಮಣೇಲ್ ಚೆಂಡ್‍ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್‍ಗ್ ಓರ್ಮೆಡ್ ಜಪ್ಪುಲೆ * ಎಂದು ಹೇಳಿದಾಗ ಚೆಂಡು ಹಿಡಿದ್ದಿದ ವ್ಯಕ್ತಿ ಪರ್ದಕಂಡ ವಾಸುದೇವ ಭಟ್ ಅವರ ಕೈಗೆ ಕೊಡುತ್ತಾರೆ ಆಗ ಅವರು ಚೆಂಡನ್ನು ಹಾರಿಸಿ ಎಸೆಯುತ್ತಾರೆ ಅಮ್ಮುಂಜೆ ಹಾಗೂ ಮಳಲಿ ಕಡೆಯ ಯುವಕರು, ಮಕ್ಕಳು ಚೆಂಡಾಟದಲ್ಲಿ ಭಾಗವಹಿಸುತ್ತಾರೆ. ಚೆಂಡು ಗದ್ದೆಯ ಬದಿಗೆ ಮುಟ್ಟಿಸಿ ಚೆಂಡು ಹಾರಿಸಿದವರಿಗೆ ಎತ್ತಿಕೊಂಡು ಬಂದು ಕೊಟ್ಟರೆ ಗೆಲುವು ಅವರಿಗಾಗುತ್ತದೆ. ಹೀಗೆ ದಿನಕ್ಕೆ ಮೂರು ಬಾರಿ ಚೆಂಡಾಟ ನಡೆಯುವುದು. ನಂತರ ಚೆಂಡನ್ನು ಶ್ರೀ ದೇವಳಕ್ಕೆ ತಂದು ಶ್ರೀ ದೇವಿಗೆ ಪೂಜೆ ನಡೆದು ದೇವಸ್ಥನಕ್ಕೆ ಒಂದು ಸುತ್ತು ಮೆರವಣಿಗೆಯಲ್ಲಿ ತಂದಲ್ಲಿಗೆ ಚೆಂಡಿನ ಉತ್ಸವ ಮುಕ್ತಾಯವಾಗುವುದು. ಇದಕ್ಕೆ ಜೀಟಿಗೆ ಸಲಾಂ ಎಂದು ಕರೆಯುತ್ತಾರೆ. ಈಗೇ ಪೊಳಲಿಯಲ್ಲಿ ಐದು ದಿನಗಳ ಚೆಂಡಿನ ಉತ್ಸವ ನಡೆಯುತ್ತದೆ.

 

By suddi9

Leave a Reply

Your email address will not be published. Required fields are marked *