ವಾಮಂಜೂರು :ನಮ್ಮ ಸಂಸೆ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ ಏ. 2ರಂದು ಭಾನುವಾರ ವಿಶ್ವ ಆಟಿಸಂ ಜಾಗೃತಿ ದಿನಾಚರಣೆಯು ಜರಗಲಿದೆ. ಮಕ್ಕಳ ಬೆಳವಣಿಯ ಹಂತದಲ್ಲಿ ಕಂಡುಬರುವ ನ್ಯೂನತೆಯಾದ ಆಟಿಸಂ(ಸ್ವಲೀನತೆ) ಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಟಿಸಂ ಜಾಗೃತಾ ದಿನವನ್ನು ಹಮ್ಮಿಕೊಂಡಿದ್ದೇವೆ. ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಸಂಸ್ಥೆಯಲ್ಲಿ ಕಳೆದ 8 ವರ್ಷಗಳಿಂದ ಆಟಿಸಂ ನಿಂದ ಬಳಲುತ್ತಿರುವ ಮಕ್ಕಳಿಗೆ ಸಾಮಾನ್ಯ ವಿದ್ಯಾರ್ಥಿಗಳೊಡನೆ ಸೇರಿಸಿ ವಿದ್ಯಾಭ್ಯಾಸವನ್ನು ಮಾಡಿಸುವ ಸಮನ್ವಯ ಶಿಕ್ಷಣದ ಮೂಲಕ ಶಿಕ್ಷಣವನ್ನು ನೀಡಲಾಗುತ್ತಿದೆ. ಜೊತೆಗೆ ಜನಸಾಮಾನ್ಯರಲ್ಲಿ ಈ ಕುರಿತು ಜಾಗೃತಿಯನ್ನೂ ಸಂಸ್ಥೆಯ ವತಿಯಿಂದ ನೀಡಲಾಗುತ್ತಿದೆ. ದಿನಾಂಕ 02/ ರಂದು ನಮ್ಮಲ್ಲಿ ನಡೆಯಲಿರುವ ವಿಶ್ವ ಆಟಿಸಂ ಜಾಗೃತಿ ದಿನಾಚರಣೆಯ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ಹಾಗೂ ರಂಗ ಭೂಮಿ ನಿರ್ದೇಶಕ, ಕಲಾವಿದ ರಾದ ಶ್ರೀ ದೇವದಾಸ್ ಕಾಪಿಕಾಡ್ ಇವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಆರೂರು ಕಿಶೋರ್ ರಾವ್, ಆಡಳಿತ ನಿರ್ದೇಶಕರು, ಮಾಂಡೋವಿ ಮೋಟಾರ್ಸ್ ಹಾಗೂ ಅರವಿಂದ ಮೋಟಾರ್ಸ್ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಶಾಂತಾರಾಮ ಶೆಟ್ಟಿ, ಚಾರ್ಟೆಡ್ ಅಕೌಂಟೆಂಟ್, ಅಧ್ಯಕ್ಷರು, ರೆಡ್ ಕ್ರಾಸ್ ಇಂಡಿಯಾ ಸಂಸ್ಥೆ, ಮಂಗಳೂರು, ದ ಕ ಜಿಲ್ಲೆ ಇವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಫ್ರೋ. ಎಂ ರಾಜೇಂದ್ರ ಶೆಟ್ಟಿ  ಇವರು ನೆರವೇರಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ನಂತರ ಮಂಗಳೂರಿನ ವಿವಿಧ ಶಿಕ್ಷಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಟಿಸಂ ಬಗ್ಗೆ ಕಾರ್ಯಾಗಾರವು ನಡೆಯಲಿದೆ.

By suddi9

Leave a Reply

Your email address will not be published. Required fields are marked *