ಉಡುಪಿ: ರೋಟರಿ ಗವರ್ನರ್ ಡಿ.ಎಸ್ ರವಿಯವರು ರೋಟರಿ ಕ್ಲಬ್ ಉಡುಪಿಗೆ ತನ್ನ ಅಧಿಕೃತ ಭೇಟಿ ನೀಡಿದರು.ಕಡಿಯಾಳಿ ದೇವಾಯದಲ್ಲಿ ಮಾ.26 ರಂದು ನಡೆದ ಕಾರ್ಯಕ್ರಮದಲ್ಲಿ ಕ್ಲಬ್ ನ ಡೈರೆಕ್ಟರಿಯನ್ನು ಬಿಡುಗಡೆಗೊಳಿಸಲಾಯಿತು.ಅಲ್ಲದೆ ಕಡಿಯಾಳಿ ಶಾಲೆಯಲ್ಲಿ ರೋಟರಿ ವತಿಯಿಂದ ನಿರ್ಮಿಸುತ್ತಿರುವ ಶೌಚಾಲಯವನ್ನು ಅದೇ ರೀತಿ ಬಾಲನಿಕೇತನದಲ್ಲಿ ನಿರ್ಮಿಸಿದ ಕೈತೊಳೆಯುವ ಬೇಸಿನ್ ಮತ್ತು ಸ್ವಚ್ಚತಾಅಭಿಯಾನದ ಗೋಡೆ ಚಿತ್ರಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅದ್ಯಕ್ಷ ಡಾ|| ಸುರೇಶ್ ಶೆಣ್ಯೆ,ಸಹಾಯಕ ಗವರ್ನರ್ ಸುಬ್ರಮಣ್ಯ ಬಾಸ್ರಿ,ವಲಯ ಸೇನಾನಿ ಜಗದೀಶ್ ಕಾಮತ್,ಕಾರ್ಯದರ್ಶಿ ರಾಮಚಂದ್ರ ಉಪಾದ್ಯಾಯ ಮುಂತಾದವರಿದ್ದರು.
