ಕೈಕಂಬ: ಧರ್ಮ ಜಾಗ್ರತೆಗಾಗಿ ದೇವಸ್ಥಾನಗಳು ಇದೆ   ನಾವು  ದೇವಸ್ಥಾನಕ್ಕೆ ಹೋಗಬೇಕಾದರೆ ನಮ್ಮ ಮನಸ್ಸು ಶುದ್ದವಾಗಬೇಕು ಕಾಮ, ಕ್ರೋದ, ಮಧ ಮತ್ಸರ  ಹೃದಯದಲ್ಲಿ  ತಂಬಿಸಿಕೊಂಡು  ಸಾಕಷ್ಟೂ ಬೇಡಿಕೆಗಳನ್ನು ತೂಂಬಿಸಿಕೊಂಡು ಬಂದರೆ ಭಗವತಿ ಅನುಗ್ರಹ ಮಾಡಿದರೆ ನಿಮ್ಮ ಹೃದಯ ಬರಿದಾಗಿರುತ್ತದೆ . ಅದಕ್ಕಾಗಿ ಹೃದಯವನ್ನು ಬರಿದು ಮಾಡಿಕೊಂಡು ಹ್ರದಯ ಕಮಲದ  ಹ್ರದಯದಲ್ಲಿ ಅಂತರಂಗದಿಂದ ದೇವಳಕ್ಕೆ ಬಂದರೆ ದೇವಿ ಪೂರ್ಣ ಅನುಗ್ರಹಿಸುತ್ತಾಳೆ ಎಂದು ಶ್ರೀ ದುರ್ಗಾ ಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಸೋಂದ ಭಾಸ್ಕರ ಭಟ್ ಹೇಳಿದರು. ಅವರು ಲೋಕಕಲ್ಯಾಣಾರ್ಥವಾಗಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡ ದೇವಿ ಭಕ್ತರನ್ನು ಉದ್ದೇಶಿಸಿ ಭಾನುವಾರ ಸರ್ವಮಂಗಳಾ ಸಭಾಗ್ರಹದಲ್ಲಿ ಪ್ರವಚನ ನೀಡಿದರು. 26 vp padayathre 3

26 vp padayathre

ಹಿಂದು ಸಮಾಜಕ್ಕೆ ಬೇಕಾದುದು ಸಂಘಟನೆ ಮತ್ತು ಶಿಸ್ತುಇದನ್ನು ನಾವು ಅಳವಡಿಸಿದರೆ ನಮ್ಮ ಮೇಲೆ ಬೇರೆ ಧರ್ಮದವರು ಯಾರು ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ. ಹಿಂದು ಸಮಾಜದಲ್ಲಿ ನ್ಯೂನತೆ ಸರಿಯಾಗದೆ ನಮ್ಮ ಸಮಾಜ ಮುಂದೆ ಬರಲು ಸಾಧ್ಯವಿಲ್ಲ ನಾವು ಧರ್ಮ ವನ್ನು ನಿಜವಾದ ಜೀವನದಲ್ಲಿ ಅಳವಡಿಸಬೇಕು .ನಮ್ಮ ಸಂಸ್ಕೃತಿಯ ಶಾಸ್ತ್ರೀಯ ಸಂಗೀತ ಭರತನಾಟ್ಯ ಇಂತಹ ಕಾರ್ಯಕ್ರಮವನ್ನು  ನಾವು ದೇವಳದಲ್ಲಿ  ಸಭಾಗ್ರಹದಲ್ಲಿ ಮಾಡಬೇಕಾಗಿದೆ ಪಾಚ್ಚಿಮಾತ್ಯರ ಅನುಕರಣೆ ಸಲ್ಲದು.ಮನಸ್ಸಿನಲ್ಲಿ ಯಾವುದೇ ನೋವಿದ್ದರು ವೈಮನಸ್ಸು ಬಿಟ್ಟು ಮನೆಯಿಂದ ಒರಗೆ ಬರುವಾಗ ಎಲ್ಲರು ಭಾರತಾಂಭೆಯ ಮಕ್ಕಳು ಎಂದು ಭಾವಿಸಿ ಒಗ್ಗಟ್ಟಾಗಿರೋಣ ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನದಲ್ಲಿ ಹಿತವಚನ ನೀಡಿದರು.
.
* ನಮ್ಮ ಧರ್ಮ ಉದ್ದಾರಾಗ ಬೇಕು:ಸ್ವಾಮಿ ವಿವೇಕ ಚೈತನ್ಯಾನಂದ

ನಮ್ಮ ಧರ್ಮ ಉದ್ದಾರವಾಗಬೇಕಾದರೆ ಋಷಿಮುನಿಗಳು ಹಿರಯರು ಮಾಡಿಕೊಟ್ಟ ಹಾಗೆ ನಡೆದುಕೊಳ್ಳಬೇಕು

26 vp pa1

ಜನಾರ್ದನ ಅಮ್ಮುಂಜೆ ಸ್ವಾಗತಿಸಿ ನಿರೂಪಿಸಿದರು.

ಲೋಕಕಲ್ಯಾಣಾರ್ಥವಾಗಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡ ದೇವಿ ಭಕ್ತರು ಬಿಸಿರೋಡು ಶ್ರೀ ರಕ್ತೇಶ್ವರೀ ದೇವಳದ ವಠಾರದಿಂದ ಚಾಲನೆ ನೀಡಲಾಯಿತು. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಪಾದ ಯಾತ್ರೆಗೆ ಚಾಲನೆ ನೀಡಿ ಶುಭಹಾರೈಸಿದರು.IMG-20170326-WA0004 (1)

49a790dd-e52d-4c77-8334-b55c7754bf2a

26 -2

ಶ್ರೀ ರಕ್ತೇಶ್ವರೀ ದೇವಳದ ವಠಾರದಿಂದ ಹೊರಟು ಬಿಸಿರೋಡು ಕೈಕಂಬದ ವಿವೇಕಾನಂದ ರಸ್ಥೆಯ ಮಾರ್ಗವಾಗಿ ಚೆಂಡೆ ಭಜನೆಯೊಂದಿಗೆ ಪಚಿನಡ್ಕ, ಕಲ್ಪನೆ, ತೆಂಕಬೆಳ್ಳೂರು, ಕಲ್ಲಗುಡ್ಡೆ ಬಡಕಬೈಲು ಮಂಗಾಜೆ ಆಗಮಿಸಿದ ಭಕ್ತಾಧಿಗಳಿಗೆ ಪಾದ ಯಾತ್ರೆಯುದ್ದಕ್ಕು ಅಲ್ಲಲ್ಲಿ ಪಾನಕ,ಬಚ್ಚಾಂಗಾಯಿ, ಬೆಲ್ಲ ನೀರು ಸಿಹಿತಿಂಡಿಗಳನ್ನು ಸಂಘಸಂಸ್ಥೆಯವರು ನೀಡಿ ಸಹಕರಿಸಿದರು. ಪಾದಯಾತ್ರೆ ಮೂಲಕ ಪೊಳಲಿ ದೇವಳಕ್ಕೆ ಶ್ರೀ ರಕ್ತೇಶ್ವರೀ ದೇವಸ್ಥಾನದಿಂದ 8.30 ಕ್ಕೆ ಹೊರಟ ಪಾದ ಯಾತ್ರಯು 11. 30 ಕ್ಕೆ ಪೊಳಲಿ ದೇವಳಕ್ಕೆ ತಲುಪಿ ದೇವರ ದರ್ಶನ ಪಡೆದು ಧಾರ್ಮಿಕ ಸಭೆಯಲ್ಲಿ ಪಾಲ್ಘೊಂಡು ಅನ್ ಪ್ರಸಾದ ಸ್ವೀಕರಿಸಿದರು. ಪ್ರಮುಖರಾದ ಸೇಸಪ್ಪ ಕೊಟ್ಯಾನ್ ಪಚಿನಡ್ಕ, ರಾಜೇಶ್ ನಾೈಕ್ ಉಳಿಪಾಡಿಗುತ್ತು,ಪದ್ಮನಾಭ ಕೊಟ್ಟಾರಿ, ಜಿತೇಂದ್ರ ಕೊಟ್ಠಾರಿ, ಸುಲೋಚನ ಜಿ.ಕೆಭಟ್, ರಾಮ್‍ದಾಸ್ ಬಂಟ್ವಾಳ್, ದೇವದಾಸ್ ಬಂಟ್ವಾಳ್, ಇಂದ್ರೇಶ್, ಬುವನೇಶ್ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು, ಜಿ.ಪಂ. ತಾ.ಪಂ. ಗ್ರಾ. ಪಂ. ಪದಾಧಿಕಾರಿಗಳು, ಮಹಿಳೆಯರು, ಮಕ್ಕಳು , ಪುರುಷರು , ಸಾವಿರಾರು ದೇವಿ ಭಕ್ತರು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *