ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆಯಲ್ಲಿ ತುಳುನಾಡ ಕೃಷಿ ಕ್ರಾಂತಿ ಸಹಯೋಗದಲ್ಲಿ 6 ಎಕರೆ ಗದ್ದೆಯಲ್ಲಿ ಬೆಳೆದ ಭತ್ತದ ಪೈರು ಕಟಾವು ಧಾನ್ಯಲಕ್ಷ್ಮಿ ಪೂಜೆಯೊಂದಿಗೆ ಮಾ.31ರಂದು ಶುಕ್ರವಾರ ಬೆಳಗ್ಗೆ ಅನ್ನಪಾಡಿ ಗಣಪತಿ ದೇವಸ್ಥಾನದಲ್ಲಿ ಜರಗಲಿದೆ.
ಕಾರ್ಯಕ್ರಮದಲ್ಲಿ ತುಳುನಾಡು ಕೃಷಿ ಕ್ರಾಂತಿ ಹರಿಕಾರ ರಾಜೇಶ್ ನಾೈಕ್ ಉಳಿಪಾಡಿಗುತ್ತು, ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ ,ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್,ಕಾರ್ಯದರ್ಶಿ ಎನ್.ಕೆ.ಇದಿನಬ್ಬ,ತಾಲೂಕು ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್,ಕಾರ್ಯದರ್ಶಿ ಸುದೇಶ ಮಯ್ಯ ಅವರು ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಉಳ್ಳಾಲದ ಅನಾಥಶ್ರಮಕ್ಕೆ ಬೆಳೆದ ಧಾನ್ಯ ದಾನ ಮಾಡಲಾಗುವುದು.
