ಉಡುಪಿ: ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ದಲ್ಲಿ ಮಾ.11 ರಂದು “ಬೃಹತ್ ರಕ್ತದಾನ ಶಿಬಿರ” ನಡೆಯಿತು.ಬ್ಯಡ್ ಬ್ಯಾಂಕ್ ಕುಂದಾಪುರ,ರೆಡ್‍ಕ್ರಾಸ್ ಸೋಸೈಟಿ,ಲಯನ್ಸ್ ಉಡುಪಿ ಇಂದ್ರಾಳಿ ಮತ್ತು ಮಿಡ್‍ಟೌನ್,ಇನ್ನರವಿಲ್, ಜೇಸಿಐ ಮಣಿಪಾಲ ಇದರ ವತಿಯಿಂದ ನಡೆದ ಶಿಬಿರವನ್ನು.ಕುಂದಾಪುರ ಬ್ಯಡ್‍ಬ್ಯಾಂಕ್ ವೈದ್ಯಾಧಿಕಾರಿ ಡಾ|| ಹೆಚ್.ಎಸ್ ಮಲ್ಲಿ ಉದ್ಘಾಟಿಸಿ ರಕ್ತದಾನದ ಬಗ್ಗೆ ಮಾತನಾಡಿದರು.IMG-20170311-WA0102 (1)

ವೇದಿಕೆಯಲ್ಲಿಕಾಲೇಜಿನ ಆಡಳಿತಾಧಿಕಾರಿ ಪ್ರೋ.ದಯಾನಂದ ಶೆಟ್ಟಿ,ಡಾ|| ಸುರೇಶ್ ಶೆಣ್ಯೆ,ರೆಡ್ಕ್ರಾಸ್ ಸೊಸೈಟಿಯ ಅದ್ಯಕ್ಷ ಬಿ ರಾಜೀವ ಶೆಟ್ಟಿ,ಶಿವರಾಮ ಶೆಟ್ಟಿ,ಶೋಭಾ ಮಧುಸೂಧನ್ ಹೆಗಡೆ,ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರಿದ್ದರು.ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ರಾಧಿಕಾ ಪೈ ವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರೆಡ್‍ಕ್ರಾಸ್ ವತಿಯಿಂದ ಕಾಲೇಜಿಗೆ ಪ್ರಮಾಣ ಪತ್ರ ಹಸ್ತಾಂತರಿಸಲಾಯಿತು. ಎನ್,ಎಸ್,ಎಸ್ ಅಧಿಕಾರಿ ಪ್ರಕಾಶ್ ಭಟ್ ಸ್ವಾಗತಿಸಿದರು.ಶ್ರೀನಿವಾಸ ವೈದ್ಯ ನಿರೂಪಿಸಿದರು. ಯುವರೆಡ್ ಕ್ರಾಸ್ ಸಂಯೋಜಕಿ ಜಯಲಕ್ಮಿ ವಂದಿದರು

By suddi9

Leave a Reply

Your email address will not be published. Required fields are marked *