ಮೂಡುಬಿದರೆ: ಗುರುವಾಯನಕೆರೆ-ಮೂಡುಬಿದರೆ ರಾಜ್ಯ ಹೆದ್ದಾರಿಯ ಗಂಟಾಲ್ಕಟ್ಟೆಯಲ್ಲಿ ಮಂಗಳವಾರ ಬೆಳಿಗ್ಗೆ ಭಾರೀ ಗಾತ್ರದ ಆಲದ ಮರ ಹಾಗೂ ಕಾಸರಕನ ಮರ ಹೆದ್ದಾರಿಗೆ ಉರುಳಿಬಿದ್ದಿದ್ದು ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

mbd_july15_2 (5)

mbd_july15_2 (1)

mbd_july15_2 (2)

ಮರ ಉರುಳಿ ಬೀಳುವ ಕೆಲವೇ ಸೆಕುಂಡುಗಳ ಮೊದಲು ಒಂದು ಬಸ್ ಹಾಗೂ ಬೈಕ್ ಹಾದುಹೋಗಿರುವುದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಪುರಸಭೆ ಹಾಗೂ ಅರಣ್ಯ ಇಲಾಖೆಯು ಜಂಟಿ ಕಾಯರ್ಾಚರಣೆ ನಡೆಸಿ ಸಾರ್ವಜನಿಕರ ನೆರವಿನಿಂದ ಮರಗಳನ್ನು ತೆರವುಗೊಳಿಸುವ ಮೂಲಕ ವಾಹನಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಮೆಸ್ಕಾಂ ಇಲಾಖೆಯವರು ವಿದ್ಯುತ್ ಸಂಪರ್ಕವನ್ನು ಸುಗಮಗೊಳಿಸಿದರು.

 

By Suddi9

Leave a Reply

Your email address will not be published. Required fields are marked *