ಮೂಡುಬಿದಿರೆ: ಇಲ್ಲಿನ ಕಲ್ಸಂಕದಲ್ಲಿರುವ ಗೋಪಾಲಕೃಷ್ಣ ದೇವಸ್ಥಾನವು ಜೀರ್ಣೋದ್ಧಾರಗೊಂಡಿದ್ದು ಭಾನುವಾರ ಬ್ರಹ್ಮಕಲಶೋತ್ಸವ ನಡೆಯಲಿದೆ.ಇದರ ಅಂಗವಾಗಿ ಭವ್ಯವಾದ ಹೊರೆ ಕಾಣಿಕೆ ಮೆರವಣಿಗೆಯು ಶುಕ್ರವಾರ ಸಂಜೆ ಸ್ವರಾಜ್ಯ ಮೈದಾನದಿಂದ ಕ್ಷೇತ್ರದ ವರೆಗೆ ನಡೆಯಿತು. ಹತ್ತಾರು ಭಕ್ತರು ಅಕ್ಕಿ, ತರಕಾರಿ, ದವಸ ಧಾನ್ಯ, ಮತ್ತಿತರ ವಸ್ತುಗಳನ್ನು ಹೊರೆಕಾಣಿಕೆಯಲ್ಲಿ ತಂದು ಕ್ಷೇತ್ರಕ್ಕೆ ಸಮರ್ಪಿಸಿದರು. ಚೌಟರ ಅರಮನೆಯ ಕುಲದೀಪ್ ಎಂ. ಮೆರವಣಿಗೆಗೆ ಚಾಲನೆ ನೀಡಿದರು.
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್, ಪದಾಧಿಕಾರಿಗಳಾದ ಜಿ. ಉಮೇಶ್ ಪೈ., ಶಿವಾನಂದ ಪ್ರಭು, ನಾರಾಯಣ ಪಿ. ಎಂ., ಪಿ.ಎಚ್.ವೇಣುಗೊಪಾಲ, ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್‍ನ ಅಧ್ಯಕ್ಷ ಗಣೇಶ್ ರಾವ್, ಸಂಚಾಲಕ ಸಂತೋಷ್ ಕುಮಾರ್, ಜೀಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ದೇವಿಪ್ರಸಾದ್ ಶೆಟ್ಟಿ, ಸುದರ್ಶನ್ ಎಂ., ರತ್ನಾಕರ ಸಿ. ಮೊಯ್ಲಿ, ಸುಶಾಂತ್ ಕರ್ಕೇರ, ಮೂಡಾದ ಅಧ್ಯಕ್ಷ ಸುರೇಶ್ ಪ್ರಭು, ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡರು.
