ಬಂಟ್ವಾಳ:ಸುತ್ತಲೂ ಬೆಟ್ಟ ಗುಡ್ಡ ,ನದಿ ಪವ೯ತಗಳಿಂದ ಕೂಡಿ ಪ್ರಕ್ರತಿ ಸೊಬಗಿನಿಂದ ಕೂಡಿರುವ ಸಮುದ್ರಮಟ್ಟದಿಂದ ಸಾವಿರಾರು ಮೀಟರ್ ನಷ್ಟು ಎತ್ತರದಲ್ಲಿರುವ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಸಾವ೯ಜನಿಕ ರುದ್ರಭೂಮಿ ದೇವಭೂಮಿಯಾಗಿ ಪರಿವತ೯ನೆಯಾಗುತ್ತಿದೆ.ಕೆಂಪುಕಲ್ಲಿನ ಪ್ರದೇಶವಾಗಿರುವ ಕಂಚಿನಡ್ಕಪದವಿನಲ್ಲಿ ಸುತ್ತಲೂ ಹಚ್ಚಹಸಿರು ಪ್ರಕ್ತಿಯ ಸೊಬಗು,ಮತ್ತೊಂದೆಡೆ ಹರಿಯುತ್ತಿರುವ ನೇತ್ರಾವತಿ ನದಿ,ನಾಲ್ಕು ದಿಕ್ಕಿನಲ್ಲಿ ಶಿವನ ಸಾನಿಧ್ಯವಿರುವ ಭೂಕೈಲಾಸವೇ ಈಹಿಂದು ರುದ್ರಭೂಮಿ.ಸಜೀಪನಡುಗ್ರಾಮದ ಕಂಚಿನಡ್ಕಪದವಿನಲ್ಲಿಸುಮಾರು 0.85 ಎಕ್ರೆ ಸ್ಥಳದಲ್ಲಿ ಸಾವ೯ಜನಿಕ ಹಿಂದು ರುದ್ರಭೂಮಿಯಿದ್ದು,ಇದೀಗ ಈ ರುದ್ರಭೂಮಿಯನ್ನು ದೇವಭೂಮಿಯಾಗಿ ಪರಿವತಿ೯ಸುವ ಕಾಯ೯ ರುದ್ರಭೂಮಿ ಸಮಿತಿ ಅಧ್ಯಕ್ಷ ಯಶವಂತ ದೇರಾಜೆಯವರ ಮಾಗ೯ದಶ೯ನ ಹಾಗೂ ಅಭಿವ್ರದ್ದಿ ಸಮಿತಿ ಅಧ್ಯಕ್ಷ ದೇವದಾಸ ಅಡಪ ಇರಾ ಅವರ ನೇತ್ರತ್ವದ ತಂಡದಿಂದ ನಡೆಯುತ್ತಿದೆ.2

4

1

3

ಸಜೀಪನಡು ಮಾತ್ರವಲ್ಲದೆ ಅಕ್ಕಪಕ್ಕದ ಸಜೀಪಪಡು,ಸಜೀಪಮೂಡ,ಸಜೀಪಮುನ್ನೂರು,ಚೇಳೂರು,ಇರಾ,ಮಂಚಿ ಗ್ರಾಮಗಳಲ್ಲಿನ ಶವ ಸಂಸ್ಕಾರಕ್ಕೆ ಇಲ್ಲಿ ಅವಕಾಶವಿದ್ದು,ಈಗ್ರಾಮಗಳ ಗ್ರಾಮಸ್ಥರನ್ನು ಕೂಡ ರುದ್ರಭೂಮಿಯ ಅಭಿವ್ರದ್ದಿ ಸಮಿತಿಯಲ್ಲಿ ಸೇರಿಸಲಾಗಿದೆ.ಸುಮಾರು ಮೂವತ್ತು ಲಕ್ಷ ರೂ.ವೆಚ್ಚದಲ್ಲಿ ಇದರ ಅಭಿವ್ರದ್ದಿ ಕಾಯ೯ ನಡೆಸಲಾಗುತ್ತಿದ್ದು,ಈಗಾಗಲೇ ಸುಮಾರು ೪೦ಅಡಿ ಎತ್ತರದ ಶಿವನ ವಿಗ್ರಹ,ಸತ್ಯ ಹರೀಶ್ಚಂದ್ರನ ಪ್ರತಿಮೆ‌ನಿಮಾ೯ಣವಾಗಿದ್ದು,೩೦ ಅಡಿ ಎತ್ತರದ ತ್ರಿಶೂಲಸ್ತಂಭ,ಡಮರು ರಚನೆಯ ಕಾಯ೯ಪ್ರಗತಿಯಲ್ಲಿದೆ,ಶ್ರೀ ಕ್ಷೇತ್ರ ಧಮ೯ಸ್ಥಳ ವತಿಯಿಂದ ಕೊಡಲ್ಪಟ್ಟ ದಹನ ಚೇಂಬರ್ ಇದ್ದು ,ಇನ್ನೊಂದು ದಹನ ಚೇಂಬರ್ ,ಪ್ರವೇಶದ್ವಾರ,ಶವಸಂಸ್ಕಾರದ ಮುನ್ನ ಮ್ರತರ ಅಂತಿಮ ದಶ೯ನಕ್ಕಾಗಿ ಮ್ರತದೇಹವನ್ನಿರಿಸಲು ಶವ ಹಾಗೂ ಸತ್ಯಹರೀಶ್ಚಂದ್ರ ಪ್ರತಿಮೆ ಯ ಸಮ್ಮುಖದಲ್ಲಿ ಕಟ್ಟೆಯೊಂದನ್ನು ನಿಮಿ೯ಸಲು ನಿಧ೯ರಿಸಲಾಗಿದೆ ಎಂದು ಅಧ್ಯಕ್ಷ ಯಶವಂತ ಡಿ.ಅವರು ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ರುದ್ರಭೂಮಿಯ ಸುತ್ತಲೂ ವಿವಿಧ ಜಾತಿಯ ಸಸಿಗಳು,ತೆಂಗಿನ ಗಡವನ್ನು ನೆಟ್ಟು ಪಾಲನೆ ಮಾಡಲಾಗುತ್ತಿದೆ. ರುದ್ರಭೂಮಿಯ ಭದ್ರತೆಯ ದ್ರಷ್ಟಯಿಂದ ಅವರಣಗೋಡೆ,ತಡೆಗೋಡೆಯನ್ನು ನಿಮಿ೯ಸಲಾಗುವುದಲ್ಲದೆ,ಸುತ್ತಲೂ ಇಂಟರ್ ಲಾಕ್ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.ಈ ಎಲ್ಲಾ ಕಾಮಗಾರಿ ಪೂಣ೯ಗೊಳಿಸಲು ಇಲ್ಲಿನ ಏಳು ಗ್ರಾಮಗಳ ಗ್ರಾಮಸ್ಥರ ಸಹಕಾರವನ್ನು ಈಸಂದಭ೯ದಲ್ಲಿ ಅವರು ಯಾಚಿಸಿದ್ದಾರೆ.ಎಲ್ಲವು ಅಂದುಕೊಂಡಂತೆ ನಡೆದರೆ‌ ಮುಂದಿನ ಮೇ ತಿಂಗಳಲ್ಲಿ ದೇವಭೂಮಿಯ ಲೋಕಾಪ೯ಣೆ ನಡೆಯಲಿದೆ ಎಂದು ಯಶವಂತ್ ತಿಳಿಸಿದ್ದಾರೆ.ವಿಶೇಷವಾಗಿ ಈರುದ್ರಭೂಮಿಗೆ ಶವ ಸಾಗಿಸುವುದಕ್ಕಾಗಿ ಅಂಬುಲೆನ್ಸ್ ಸೇವೆಯನ್ನು ಉಚಿತವಾಗಿ ನೇತಾಜಿ ಯುವಕ ಸಂಘದಿಂದ ಕಲ್ಪಿಸಲಾಗಿದೆ.

By suddi9

Leave a Reply

Your email address will not be published. Required fields are marked *