ಕೈಕಂಬ:ಸಾಣೂರುಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ 9ನೇ ವರ್ಷದ ಭಜನಾ ಸಂಕೀರ್ತನೆಯನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಶುಕ್ರವಾರ ದೀಪ ಬೆಳಗಿಸಿ ಭಜನೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸೊಲ್ತಾಡಿ ಶಿವಪ್ರಸಾದ್, ದೇವಪ್ಪ ಭಂಡಾರಿ, ವಿಶ್ವನಾಥ ಪೂಜಾರಿ, ವಾಮನ ಪೂಜಾರಿ,ರಘುವೀರ ಮತ್ತಿತರರು ಇದ್ದರು. ಶುಕ್ರವಾರ ಸೂರ್ಯೋದಯದಿಂದ ಮರುದಿನ ಶನಿವಾರ ಸೂರ್ಯೋದಯದವರೆಗೆ ನಾನಾ ಭಜನಾ ತಂಡಗಳಿಂದ ಭಜನಾಸಂಕೀರ್ತನೆ ಜರಗಲಿದೆ.



