ಸಾಧಕರಿಗೆ ಸನ್ಮಾನ, ಕಚೇರಿ ನಾಮಫಲಕ ಅನಾವರಣ
ಬಂಟ್ವಾಳ:ಪ್ರಸಕ್ತ ಸಮಾಜದಲ್ಲಿ ಅವಿರತ ದುಡಿಮೆ ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳ ಬೇಡಿಕೆಗಾಗಿ ಸಂಘಟನೆ ಅನಿವಾರ್ಯವಾಗಿದೆ. ಕಳೆದ 60 ವರ್ಷಗಳಿಂದ ಕೇಂದ್ರ ಸಕರ್ಾರದ ಸಾಮಾಜಿಕ ಚಟುವಟಿಕೆಗಳಿಗೆ ಆಥರ್ಿಕ ನೆರವು ಮತ್ತು ಜನರಲ್ಲಿ ಉಳಿತಾಯ ಮನೋಭಾವ ಮೂಡಿಸಿ ಜೀವನ ಭದ್ರತೆ ಒದಗಿಸುತ್ತಿರುವ ಎಲ್ಲೈಸಿ ಸಂಸ್ಥೆಗೆ ಪ್ರತಿನಿಧಿಗಳು ಜೀವಾಳವಾಗಿದ್ದಾರೆ ಎಂದು ಬಂಟ್ವಾಳ ಎಲ್ಲೈಸಿ ಶಾಖಾಧಿಕಾರಿ ಡಿ.ಬಾಲಕೃಷ್ಣ ಹೇಳಿದ್ದಾರೆ.
ತಾಲ್ಲೂಕಿನ ಭಾರತೀಯ ಜೀವ ವಿಮಾ ನಿಗಮ (ಎಲ್ಲೈಸಿ) ಪ್ರತಿನಿಧಿಗಳ ಎಸೋಸಿಯೇಶನ್ ವತಿಯಿಂದ ಬಿ.ಸಿ.ರೋಡ್ನಲ್ಲಿ ಮಂಗಳವಾರ ನಡೆದ ವಾಷರ್ಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಂಘದ ಜಿಲ್ಲಾಧ್ಯಕ್ಷ ಜನಾರ್ದನ ಪೆರಾಜೆ ಅವರು ಬಂಟ್ವಾಳ ನೂತನ ಕಚೇರಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಕೆ.ಭಂಡಾರಿ ಮಾತನಾಡಿ, ಸಂಘದ ಆಥರ್ಿಕ ಚಟುವಟಿಕೆ ಮತ್ತು ಸಾಲ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು.

ಬಂಟ್ವಾಳ ಶಾಖೆ ಆಡಳಿತಾಧಿಕಾರಿ ರಾಮಯ್ಯ ಶೆಟ್ಟಿ, ಸಹಾಯಕ ಶಾಖಾಧಿಕಾರಿ ಮಧುಸೂಧನ, ಬೆಳ್ತಂಗಡಿ ಶಾಖಾಧಿಕಾರಿ ಯೋಗೇಂದ್ರ, ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಂ.ವಿ.ಶೆಟ್ಟಿ ಮತ್ತಿತರರು ಮಾತನಾಡಿ, ಎಲ್ಲೈಸಿ ಮಹತ್ವ, ಸಂಘಟನೆ, ಪ್ರತಿನಿಧಿಗಳ ಜವಾಬ್ದಾರಿ ಬಗ್ಗೆ ವಿವರಿಸಿದರು.
ಇದೇ ವೇಳೆ ಸದಸ್ಯತನ ಅಭಿಯಾನ ಸಹಿತ ವಿಮಾ ಕ್ಷೇತ್ರದ ಸಾಧಕರಾದ ರಮೇಶ ಬಂಗೇರ ಮತ್ತು ವಿನ್ಸೆಂಟ್ ಡಿಸೋಜ ಇವರನ್ನು ಸನ್ಮಾನಿಸಲಾಯಿತು. ಮಹಿಳಾ ಘಟಕ ಅಧ್ಯಕ್ಷೆ ಶಕಿಲಾ ಅಡ್ಯಂತಾಯ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಲೋಕೇಶ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದಶರ್ಿ ನಾರಾಯಣ ಅಮೀನ್ ವಂದಿಸಿದರು. ಹಿರಿಯ ಪ್ರತಿನಿಧಿ ವಸಂತ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರತಿನಿಧಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
—
