ಮೂಡುಬಿದಿರೆ: ಬಾಬೂ ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಿ. ರಮಾನಾಥ ಶೆಣೈ (84) ಫೆ.9ರಂದು ನಿಧನ ಹೊಂದಿದರು. ಅವರು ಪತ್ನಿಯನ್ನು ಅಗಲಿದ್ದಾರೆ.
ಮೊದಲಿಗೆ ಅವರು ಕಂಬನ್ಡ್ ಬುಕ್ಕಿಂಗ್ ಬಸ್ ಸರ್ವೀಸ್‍ನಲ್ಲಿ ಚೆಕ್ಕಿಂಗ್ ಇನ್ಸ್‍ಫೆಕ್ಟರ್ ಕೆಲಸದಲ್ಲಿದ್ದರು. ಶಾಲಾ ನೌಕರಿಯ ಜತೆಜತೆಗೇ ಸಮಾಜ ಮಂದಿರ ಸಭಾ, ಜ್ಯೋತಿನಗರದ ಗಾಂಧಿಶತಾಬ್ದಿ ಪಾರ್ಕ್ ಇವುಗಳ ಮೇಲ್ವಿಚಾರಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಬಾಲ್‍ಬ್ಯಾಡ್ಮಿಂಟನ್ ಜಿಲ್ಲಾ, ರಾಜ್ಯ ಮಟ್ಟದ ತೀರ್ಪುಗಾರರಾಗಿದ್ದ ಅವರು ಸಮಾಜ ಮಂದಿರದಲ್ಲಿ ಪ್ರಾರಂಭದ ನೆಲೆ ಕಂಡ ಅನೇಕ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ಮಾರ್ಗದರ್ಶನ ನೀಡುತ್ತಿದ್ದರು. ದಸರಾ ಉತ್ಸವ ಸಹಿತ ಸಮಾಜ ಮಂದಿರದಲ್ಲಿ ನಡೆಯುತ್ತಿದ್ದ ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಅವರ ಕ್ರಿಯಾಶೀಲತೆ ಗವನಾರ್ಹವಾಗಿತ್ತು.

mbd_feb8_4

By Suddi9

Leave a Reply

Your email address will not be published. Required fields are marked *